Conference organized by 18 Kodava speaking communities, 21/02/2023
Had the privilege of being invited to attend a wonderful conference organized by 18 Kodava speaking communities to draw attention to the Government's lack of initiative towards giving this community the representation and opportunities they deserve. There was a call to action for a much-demanded study of their traditions and culture for education and awareness about the Kodava speaking people.
The conference also featured a noteworthy exhibition of Kodava books and artefacts! I am thankful to have been able to join this effort and support the Kodava speaking communities.
ಕೊಡವ ಭಾಷಿಕ ಸಮುದಾಯಗಳ ಕೂಟ,18 ಕೊಡವ ಭಾಷಿಕ ಜನಾಂಗದ ಒಕ್ಕೂಟ ಏರ್ಪಡಿಸಿದ್ದ ಒತ್ತೋರ್ಮೆ ಕೂಟಕ್ಕೆ ಅತಿಥಿಯಾಗಿ ಪ್ರೀತಿಯಿಂದ ಅಹ್ವಾನ ನೀಡಿದ್ದರು. ಈ ಒಕ್ಕೂಟ ತನ್ನ ಮೂಲಭೂತ ಹಕ್ಕುಗಳಿಗಾಗಿ ಸರ್ಕಾರಕ್ಕೆ ಭಿನವತ್ತಳೆ ಅರ್ಪಿಸಿತು. ಕುಲ ಶಾಸ್ತ್ರ ಅಧ್ಯಯನದ ಅಗತ್ಯತೆಯ ಕುರಿತು ಬೆಳಕು ಚೆಲ್ಲಲಾಯಿತು. ಕೊಡವ ಜನಾಂಗದ ಕುಲ ಶಾಸ್ತ್ರ ಅಧ್ಯಯನ 6 ವರ್ಷಗಳಿಂದ ಮುಗಿಯದೇ ಇರುವ ಬಗ್ಗೆ ಸರ್ಕಾರದ ಗಮನ ಸೆಳೆಯಲಾಯಿತು . ಕೊಡವ ಜನಾಂಗದ ವಸ್ತು ಪ್ರದರ್ಶನ ಮತ್ತು ಪುಸ್ತಕ ಪ್ರದರ್ಶನ ಗಮನಾರ್ಹವಾಗಿದ್ದವು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa #Shivakeri #Talakaveri #KodavaSong #Kutta #Nalkeri

On the occasion of Maha Shivaratri, visited various temples in Virajpet, 20/02/2023
ಮಹಾ ಶಿವರಾತ್ರಿ ಪ್ರಯುಕ್ತ ವಿರಾಜ ಪೇಟೆ ವಿಧಾನ ಸಭಾ ಕ್ಷೇತ್ರದಲ್ಲಿ ವಿವಿಧ ದೇವಾಲಯಳಿಗೆ ಭೇಟಿ ನೀಡಿ ಈಶ್ವರನಿಗೆ ಕ್ಷೇತ್ರದ ಜನರ ಒಳಿತಿಗಾಗಿ ಪ್ರಾರ್ಥಿಸಿದೆ. ಮಾತಾಯಿ ಪುರುಷರ ಸ್ವ ಸಹಾಯ ಸಂಘ ಪೊನ್ನಂಪೇಟೆ ,ಅನುಗ್ರಹ ಯುವಕ ಸಂಘ ಅರುವತೊಕ್ಲು, ಶ್ರೀ ಕಾವೇರಿ ಸಂಘ ಗೊಣಿಕೊಪ್ಪಲು. ಇವೆಲ್ಲ ಸಂಘಗಳು ನಮ್ಮ ಸನಾತನ ಧರ್ಮದ ಸಂಸ್ಕೃತಿಗಳನ್ನ ,ಸಾಂಸ್ಕೃತಿಕ ಕಲೆಗಳನ್ನ ನಮ್ಮ ಇಂದಿನ ಮತ್ತು ಮುಂದಿನ ಪೀಳಿಗೆಗೆ ತಲುಪಿಸುವಲ್ಲಿ ಮಹತ್ತರ ಪಾತ್ರ ವಹಿಸುವತ್ತಿವೆ.

The Kodagu District Photographers Welfare Association cordially invited me to their Chhaya Sammilana program, 19/02/2023
ಛಾಯಾಗ್ರಾಹಕರು ಮಾಧ್ಯಮದ ಒಂದು ಅವಿಭಾಜ್ಯ ಅಂಗ, ೨೦೧೨ ರಲ್ಲಿ ಶುರುವಾದ ಕೊಡಗು ಜಿಲ್ಲಾ ಛಾಯಾಗ್ರಾಹಕರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಮಾರ್ಚ್ ೭ ,೨೦೨೩ ರಂದು ನಡೆಸುತ್ತಿರುವ ಛಾಯಾ ಸಮ್ಮಿಲನ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಅಹ್ವಾನ ನೀಡಿದರು. ಕೊವಿಡ್ ಸಂದರ್ಭದಲ್ಲಿ ನಮ್ಮಿಂದಾದ ಅಲ್ಪ ಸೇವೆಯನ್ನ ಈ ಸಮಯದಲ್ಲಿ ಸ್ಮರಿಸಿ ಆಡಿದ ಮಾತುಗಳು ಮೂಕ ವಿಸ್ಮಿತ ಮಾಡಿತು. ನಿಮ್ಮ ಪ್ರೀತಿಗೆ ನಾನು ಸದಾ ಚಿರ ಋಣಿ. ತಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾನು ಕೂಡ ಉತ್ಸುಕನಾಗಿದ್ದೇನೆ.

Joining hands for construction of Kunjalgeri Shiva temple, 18/02/2023
Joining hands for construction of Kunjalgeri Shiva temple. ಕುಂಜಲಗೇರಿ ಶಿವ ದೇವಸ್ಥಾನ ನಿರ್ಮಾಣಕ್ಕೆ ಕಾಣಿಕೆ
ವಿರಾಜಪೇಟೆ ತಾಲ್ಲೂಕಿನ ಕಾಕೋಟುಪರಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜಿಲಗೇರಿಯಲ್ಲಿ ನಿರ್ಮಾಣವಾಗುತ್ತಿರುವ ಶಿವ ದೇವಾಲಯಕ್ಕೆ ಭೇಟಿ ನೀಡಿ ನಿರ್ಮಾಣ ಕಾರ್ಯದ ಪ್ರಗತಿ ಬಗ್ಗೆ ಗ್ರಾಮಸ್ಥರು ಮತ್ತು ಸ್ಥಳೀಯ ಮುಖಂಡರುಗಳ ಜೊತೆ ಚರ್ಚಿಸಿದೆ.
ಕುಂಜಿಲಗೇರಿ ಒಂದು ಐತಿಹಾಸಿಕ ಹಿನ್ನೆಲೆ ಇರುವ ಗ್ರಾಮ. ಇಲ್ಲಿ ನಿರ್ಮಾಣವಾಗುತ್ತಿರುವ ಈ ನೂತನ ಶಿವ ದೇವಾಲಯದ ನಿರ್ಮಾಣ ಕಾರ್ಯಕ್ಕೆ ನನ್ನ ಕೈಲಾದ ಕಾಣಿಕೆ ಸಲ್ಲಿಸಿದ್ದೇನೆ. ಆದಷ್ಟು ಬೇಗ ನಿರ್ಮಾಣ ಕಾರ್ಯ ಮುಗಿದು ದೇವಾಲಯದಲ್ಲಿ ಪೂಜೆ ಪುರಸ್ಕಾರ ಕಾರ್ಯ ಶುರುವಾಗಲಿ ಎಂದು ದೇವರಲ್ಲಿ ಬೇಡಿದೆ.
ಈ ಮಹಾಶಿವರಾತ್ರಿ ಹಬ್ಬದಂದು ನಾಡಿನ ಸಕಲ ಜನರಿಗೂ ಆ ದೇವರು ನೆಮ್ಮದಿ ಮತ್ತು ಸಂತೃಪ್ತಿಯ ಜೀವನ ಕರುಣಿಸಲಿ ಎಂದು ಬೇಡುತ್ತೇನೆ.
#HappyShivaratri #Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri

Met with the Kodagu Deputy Commissioner, 16/02/2023
ಕೊಡಗು ಜಿಲ್ಲಾ ಅಧಿಕಾರಿಯವರಿಗೆ ಭೇಟಿ ಮಾಡಿ ಮೂಕಂದನೆ ಬಾವಳಿ ಗ್ರಾಮದಲ್ಲಿ ಗ್ರಾಮಸ್ಥರ ವಸತಿ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿ ಅದನ್ನ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಗ್ರಾಮಸ್ಥರು, ಗಣ್ಯರು ನನ್ನ ಈ ಹೋರಾಟಕ್ಕೆ ಜೊತೆಯಾದರು.
