Today, as we celebrate Labour Day, let us remember the tireless efforts of hardworking individuals everywhere, 01/05/2023

ಇಂದು ಕಾರ್ಮಿಕರ ದಿನವನ್ನು ಆಚರಿಸುತ್ತಿರುವಾಗ, ಎಲ್ಲಾ ಕಾರ್ಮಿಕರ ದಣಿವರಿಯದ ಪ್ರಯತ್ನಗಳನ್ನು ಸ್ಮರಿಸಿಕೊಳ್ಳೋಣ. ನಿಮ್ಮ ಸಮರ್ಪಣೆ ಮತ್ತು ಪರಿಶ್ರಮವು ನಮ್ಮ ಜಗತ್ತು ಮುಂದೆ ಹೋಗಲು ಸಹಾಯಕಾರಿಯಾಗಿದೆ. ನೀವು ನಮ್ಮ ಸಮುದಾಯಗಳ ಬೆನ್ನೆಲುಬಾಗಿದ್ದೀರಿ, ಮತ್ತು ನೀವು ಮಾಡುವ ಎಲ್ಲ ಕೆಲಸಗಳಿಗೂ ನಾವು ಎಂದೆಂದಿಗೂ ಕೃತಜ್ಞರಾಗಿರುತ್ತೇವೆ.
 
Today, as we celebrate Labour Day, let us remember the tireless efforts of hardworking individuals everywhere. Your dedication and perseverance keep our world moving forward. You are the backbone of our communities, and we are forever grateful for everything you do. Happy Labour Day!
 
 
img
 

Campaigned for votes with local congress leaders and fans, 01/05/2023

ಶ್ರೀಮಂಗಲದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀ ಎ. ಎಸ್. ಪೊನ್ನಣ್ಣ ಅವರ ಪರವಾಗಿ ಅವರ ಧರ್ಮಪತ್ನಿಯಾದ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರು ಅಲ್ಲಿನ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಅಭಿಮಾನಿಗಳೊಂದಿಗೆ ಮತಯಾಚನೆ ಮಾಡುವುದರ ಮೂಲಕ ಬಿರುಸುನ ಪ್ರಚಾರ ಕೈಗೊಂಡರು.
 
ಈ ಸಂದರ್ಭದಲ್ಲಿ ಪೊನ್ನಣ್ಣ ಅವರ ಆಯ್ಕೆಯಿಂದ ಕ್ಷೇತ್ರದ ಜನರಿಗಾಗುವ ಅನುಕೂಲಗಳ ಬಗ್ಗೆ ಮನದಟ್ಟು ಮಾಡಿದರು.
 
ಈ ಸಮಯದಲ್ಲಿ ಅವರಿಗೆ ಸಿಕ್ಕ ಜನ ಬೆಂಬಲವು ಜನ ಪೊನ್ನಣ್ಣ ಅವರ ಮೇಲಿಟ್ಟಿರುವ ಭರವಸೆ, ವಿಶ್ವಾಸದ ಪ್ರತಿರೂಪವಾಗಿದೆ.
 
 
img
 

The fiery election campaign blazed a trail through the stunning locales of Bhagamandala and Napoklu, 30/04/2023

ಭಾಗಮಂಡಲ, ನಾಪೋಕ್ಲು ಭಾಗಗಳಲ್ಲಿ ಪಕ್ಷದ ಕಾರ್ಯಕರ್ತರು, ನಾಯಕರುಗಳೊಂದಿಗೆ ಚುನಾವಣಾ ಪ್ರಚಾರ ಮಾಡಲಾಯಿತು.
 
The fiery election campaign blazed a trail through the stunning locales of Bhagamandala and Napoklu, led by our intrepid party workers and fearless leaders. Let's make our voices heard!
 
 
img
 

The cornerstone of a functioning democracy is the election campaign, 29/04/2023

ಪ್ರಜಾಪ್ರಭುತ್ವದಲ್ಲಿ ಚುನಾವಣಾ ಪ್ರಚಾರ ಯಾವಾಗಲೂ ಅಭಿವೃದ್ಧಿ ಯೋಜನೆಗಳು, ಕ್ಷೇತ್ರದ ಬಗ್ಗೆ ಅಭ್ಯರ್ಥಿಯ ದೂರದೃಷ್ಟಿಕೋಣ, ಜನಪರ ಹಿತಾಸಕ್ತಿಗಳು, ಅಭಿವೃದ್ಧಿಯ ಸುತ್ತ ಮಾಡಬೇಕೆ ಹೊರತು ದುರಾಲೋಚನೆ, ತೇಜೋವಧೆ, ಅಪಪ್ರಚಾರ ನಡೆಸಿ ಮಾಡುವಂತದ್ದಲ್ಲ.
 
ನಮ್ಮ ಮತದಾರರು ವಿದ್ಯಾವಂತರು, ಈ ಎಲ್ಲ ಕುತಂತ್ರ, ಸಂಚುಗಳ ಹಿಂದಿನ ನಿಜವಾದ ದುರುದ್ದೇಶಗಳನ್ನು ಗ್ರಹಿಸಲು ಸಮರ್ಥರಾಗಿದ್ದೀರಿ. ನಮ್ಮ ಕ್ಷೇತ್ರದ ಅವಶ್ಯಕತೆಗಳೇನು, ಅವುಗಳನ್ನು ಯಾವ ಅಭ್ಯರ್ಥಿಯು ಪೂರೈಸಬಲ್ಲ ಎಂದು ಯೋಚಿಸಿ ಮತ ಚಲಾಯಿಸಿ.
 
~~~~~~~
 
The cornerstone of a functioning democracy is the election campaign, where a candidate presents their vision for the constituency's development plans and the people's interests. It is imperative that this process remain untainted by malicious propaganda or demeaning behavior.
 
Our electorate is a learned one, able to discern the genuine intent behind such machinations, and they should vote based on the needs of our constituency and the candidate who can best meet them.
 
 
img
 

A visit to Kutta, Nalkere and Kanur to visit the people, 28/04/2023

ಕುಟ್ಟ, ನಲ್ಕೆರೆ ಮತ್ತು ಕಾನೂರಿಗೆ ಭೇಟಿ ನೀಡಿದ ಸಂದರ್ಭ
 
A visit to Kutta, Nalkere and Kanur to visit the people.
 
 
img