The annual fair of Sri Bolli Billayyappa Temple at Maitadi, 19/03/2023
ಮೈತಾಡಿಯ ಶ್ರೀ ಬೊಳ್ಳಿ ಬಿಲ್ಲಯ್ಯಪ್ಪ ದೇವಸ್ಥಾನದ ವಾರ್ಷಿಕ ಜಾತ್ರೆಯು ದಿನಾಂಕ 16-03-2023ರಂದು ಜರುಗಿತು. ಈ ಸಂದರ್ಭದಲ್ಲಿ ದೇವಸ್ಥಾನಕ್ಕೆ ಭೇಟಿನೀಡಿ, ನಮ್ಮ ಕ್ಷೇತ್ರದ ಜನತೆಯ ಒಳಿತಿಗಾಗಿ ಪ್ರಾರ್ಥಿಸಿ, ದೇವರ ಆಶೀರ್ವಾದ ಪಡೆದು, ಪುನೀತನಾದೆನು. The annual fair of Sri Bolli Billayyappa Temple at Maitadi was a divine experience, seeking blessings and praying for the well-being of all of us.

The local leader Joachim of Virajpet and his supporters joined the party, 18/03/2023
ದಿನಾಂಕ 16-03-2023ರಂದು ವಿರಾಜಪೇಟೆಯ ನಮ್ಮ ಕಛೇರಿಯಲ್ಲಿ ಸ್ಥಳೀಯ ನಾಯಕರಾದ ಶ್ರೀ ಜೋಕಿಂ ರಾಡ್ರಿಗಸ್ ಹಾಗೂ ಅವರ ಬೆಂಬಲಿಗರು ಕಾಂಗ್ರೆಸ್ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಪಕ್ಷಕ್ಕೆ ಸೇರಿದರು. ಈ ಸಂದರ್ಭದಲ್ಲಿ ಕೊಡಗು ಕಾಂಗ್ರೆಸ್ಸಿನ ಜಿಲ್ಲಾಧ್ಯಕ್ಷರು, ಇತರೆ ಬ್ಲಾಕಿನ ಪದಾಧಿಕಾರಿಗಳು, ಅಪಾರ ಕಾರ್ಯಾಕರ್ತರೂ ಉಪಸ್ಥಿತರಿದ್ದರು. ಈ ಬೆಳವಣಿಗೆ ನಮ್ಮ ಪಕ್ಷಕ್ಕೆ ನವಚೈತನ್ಯ ತುಂಬಿದ್ದು, ಕಾರ್ಯಕರ್ತರು ಇನ್ನಷ್ಟು ಉತ್ಸಾಹದಿಂದ ಕೆಲಸ ಮಾಡಲು ಅನುಕೂಲವಾಗಲಿದೆ. On 16-03-2023, at my residence office in Virajpet, the local leader Joachim and his supporters joined the party. Kodagu Congress district president, office-bearers of other blocks and a large number of party workers were present on the occasion. This development has given a new lease of life to our party and will enable the Karyakartas to work enthusiastically.

Free Dental Check-up Camp by Coorg Institute of Dental Sciences advocating the importance of dental health, 17/03/2023
ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸಸ್ ಹಮ್ಮಿಕೊಂಡಿದ್ದ ಉಚಿತ ದಂತ ತಪಾಸಣಾ ಶಿಬಿರಕ್ಕೆ ನಾನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದೆ. ಈ ಸಂದರ್ಭದಲ್ಲಿ ಮಾತನಾಡಿ, ಸಾಮಾನ್ಯ ಆರೋಗ್ಯದೊಂದಿಗೆ ನಮ್ಮ ಹಲ್ಲಿನ ಆರೋಗ್ಯವೂ ಪ್ರಮುಖವಾದುದು, ಅದರ ಬಗ್ಗೆ ನಿರ್ಲಕ್ಷ್ಯ ತೋರದೆ, ಹಲ್ಲಿನ ಬಗ್ಗೆ ಕಾಳಜಿವಹಿಸಿಕೊಳ್ಳಬೇಕು ಎಂದು ಅಲ್ಲಿ ನೆರೆದಿದ್ದ ಸಭಿಕರಿಗೆ ಹೇಳಿದೆ. ಪ್ರತಿ ವರ್ಷವೂ ಜನಪರ ಸೇವೆಗಳನ್ನು ಹಮ್ಮಿಕೊಳ್ಳುತ್ತಿರುವ ಈ ಸಂಸ್ಥೆಯು ಇನ್ನೂ ಎತ್ತರಕ್ಕೆ ಬೆಳೆಯಲಿ ಎಂದು ಶುಭಕೋರಿದೆ. I was honored to be the chief guest at the Free Dental Check-up Camp by Coorg Institute of Dental Sciences advocating the importance of dental health. Let's prioritize our dental health as much as our general health. A healthy smile leads to a healthy life! Wishing the Institute all the success in their endeavors to provide pro-people services every year.

Visit to the Government Higher Primary School in K-Badaga village and donated 15 benches and 5 chairs to the school, 16/03/2023
ಕೆ. ಬಾಡಗ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ, ಶಾಲೆಯಲ್ಲಿ ಕೊರತೆಯಿದ್ದ 15 ಬೆಂಚುಗಳನ್ನು ಹಾಗೂ 5 ಖುರ್ಚಿಗಳನ್ನು ಕೊಡುಗೆ ನೀಡಿದೆನು. ಈ ನನ್ನ ಅಲ್ಪ ಕಾಣಿಕೆಯು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ಭಾವಿಸಿದ್ದೇನೆ. ಹಾಗೆಯೇ ಶಾಲಾಪಠ್ಯಗಳಲ್ಲಿ ಕನ್ನಡ ಭಾಷೆಯ ಮಹತ್ವದ ಬಗ್ಗೆಕೂಡ ಮನವರಿಕೆ ಮಾಡಿಸಿದೆನು.. I visited the Government Higher Primary School in K-Badaga village and donated 15 benches and 5 chairs to the school to provide for their lack of adequate facilities. I hope that this meagre contribution of mine will benefit the students. I also discussed the importance of Kannada language in school textbooks.

Held meetings and consultations with party workers in Gonikoppa, Hudikeri and Arji Panchayat villages, 15/03/2023
ಗೋಣಿಕೊಪ್ಪ, ಹುದಿಕೇರಿ ಮತ್ತು ಅರ್ಜಿ ಪಂಚಾಯತ್ ವ್ಯಾಪ್ತಿಗೆ ಬರುವ ಗ್ರಾಮಗಳಿಗೆ ಭೇಟಿಯಾಗಿ ಪಕ್ಷದ ಕಾರ್ಯಕರ್ತರೊಂದಿಗೆ ಸಮಾಲೋಚನೆಗಳನ್ನ ನಡೆಸಿದ ಕ್ಷಣಗಳು. I had an eventful evening recently when we held meetings and consultations with party workers in Gonikoppa, Hudikeri and Arji Panchayat villages. I eagerly look forward to doing some good work with our dedicated party workers in the coming future.
