Met with the Kodagu Deputy Commissioner, 16/02/2023
ಕೊಡಗು ಜಿಲ್ಲಾ ಅಧಿಕಾರಿಯವರಿಗೆ ಭೇಟಿ ಮಾಡಿ ಮೂಕಂದನೆ ಬಾವಳಿ ಗ್ರಾಮದಲ್ಲಿ ಗ್ರಾಮಸ್ಥರ ವಸತಿ ಸಮಸ್ಯೆಗಳ ಬಗ್ಗೆ ಮನದಟ್ಟು ಮಾಡಿ ಅದನ್ನ ಬಗೆ ಹರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಯಿತು. ನಮ್ಮ ಮನವಿಗೆ ಅವರಿಂದ ಸಕಾರಾತ್ಮಕ ಪ್ರತಿಕ್ರಿಯೆ ದೊರೆತಿದೆ. ಗ್ರಾಮಸ್ಥರು, ಗಣ್ಯರು ನನ್ನ ಈ ಹೋರಾಟಕ್ಕೆ ಜೊತೆಯಾದರು.

Visited the ancient Kadanur Sri Bhagwati Temple and sought the blessings of the sacred Goddess., 16/02/2023
ಪುರಾತನ , ಪ್ರಸಿದ್ಧ, ಪವಿತ್ರ ಕದನೂರು ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದು ಕೃತಾರ್ಥನಾದೆ. ತದನಂತರ ನೆರೆದಿದ್ದ ಗಣ್ಯರ ಜೊತೆ ಕೊಡಗಿನ ಮೂಲಭೂತ ಸೌಕರ್ಯಗಳ ಕೊರತೆಯ ಬಗ್ಗೆ,ಕೃಷಿಕರ ಕಾನೂನಿನ ಹೋರಾಟಗಳ ಬಗೆಗಿನ ಚರ್ಚೆ ನಡೆಸಿದೆ. "ನಮ್ಮ ಇಂದಿನ ಮತ್ತು ಹಿಂದಿನ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ.. ಒಂದು ಅವಕಾಶ ನೀಡಿ, ಬದಲಾವಣೆಯ ಪರ್ವ ಕಾಣುವ.."

Prayed at the Muttappa temple of Karadikooppa village., 15/02/2023
ಕರಡಿಕೊಪ್ಪ ಗ್ರಾಮದ ಮುತ್ತಪ್ಪ ದೇವಸ್ಥಾನಕ್ಕೆ ಭೇಟಿಯಾದ ಸಂದರ್ಭ. ನನನ್ನ ಆತ್ಮಿಯವಾಗಿ ಬರ ಮಾಡಿಕೊಂಡರು. ವಿಶೇಷ ಪೂಜೆ ಸಲ್ಲಿಸಿ ಅಲ್ಲಿ ನೆರೆದ ಗ್ರಾಮಸ್ಥರನ್ನ ಮತ್ತು ಹಿರಿಯರನ್ನ ಉದ್ದೇಶಿಸಿ ಮಾತನಾಡಿದೆ.

Tiger attacks: Don't play with lives and emotions of people, 15/02/2023
Tiger attacks: Don't play with lives and emotions of people. ಜನರ ಭಾವನೆ ಮತ್ತು ಜೀವಗಳ ಜೊತೆ ಆಟ ಆಡಬೇಡಿ
ಪ್ರತಿ ಬಾರಿ ಹುಲಿ ದಾಳಿಯಾದಾಗ ವೀರಾವೇಶದಿಂದ ಪ್ರಚೋದನೆಯ ಮಾತುಗಳನ್ನು ಆಡಿ, ಜನರಲ್ಲಿ ಆತಂಕ ಮೂಡಿಸುವುದು ಮಾತ್ರ ಜನ ಪ್ರತಿನಿಧಿಗಳ ಕೆಲಸವಿದ್ದಂತಿದೆ. ಮುಂದಿನ ದಾಳಿಯಾಗುವವರೆಗೂ ಜನರ ದಿಕ್ಕುತಪ್ಪಿಸುವ ಇಂತಹ ಕೆಲಸಕ್ಕೆ ಬಾರದ ಮಾತುಗಳನ್ನು ನಿಲ್ಲಿಸಿ ಕಾಡುಪ್ರಾಣಿಗಳು ಊರಿನೊಳಗೆ ಬರದಂತೆ ವೈಜ್ಞಾನಿಕ ಕ್ರಮಗಳನ್ನು ಜರುಗಿಸಬೇಕಾಗಿದೆ.
ಹುಲಿ ದಾಳಿ ನಡೆಯುತ್ತಿರುವುದು ಕಾಡಿನಲ್ಲಿ ಅಲ್ಲ; ಜನ ವಾಸ ಮಾಡುವ ಪ್ರದೇಶಗಳಲ್ಲಿ. ನಾಗರಹೊಳೆಯಲ್ಲಿ ಹುಲಿಗಳ ಸಂಖ್ಯೆ ಜಾಸ್ತಿಯಾಗಿದೆಯೇ? ಹಾಗಿದ್ದ ಪಕ್ಷದಲ್ಲಿ ಅವನ್ನು ಸ್ಥಳಾಂತರಿಸುವ ಪ್ರಕ್ರಿಯೆ ಶುರುವಾಯಿತೆ? ಶಾಶ್ವತ ಪರಿಹಾರ ಕಂಡುಹಿಡಿಯುವುದನ್ನು ಬಿಟ್ಟು ದಾಳಿಯಾದಾಗ ಮಾತ್ರ ಕಾಡಿಗೆ ನುಗ್ಗಿ ಗುಂಡು ಹೊಡೆಯುತ್ತನೆ ಎನ್ನುವ ಹೇಳಿಕೆ ಕೊಡುವುದು ಹಾಸ್ಯಾಸ್ಪದ.
ಜನರ ಭಾವನೆ ಮತ್ತು ಜೀವಗಳ ಜೊತೆ ಆಟ ಆಡಬೇಡಿ. ಹುಲಿ ದಾಳಿ, ಆನೆ ದಾಳಿಗಳು ರಾಜಕೀಯ ವಸ್ತುಗಳಲ್ಲ. ಕಾನೂನಿನ ಚೌಕಟ್ಟಿನಲ್ಲಿ, ಪ್ರಾಣಿಗಳಿಗೆ ಮತ್ತು ಅರಣ್ಯಕ್ಕೆ ಹಾನಿಯಾಗದಂತೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಬೇಕೇ ಹೊರತು ಜನರಲ್ಲಿ ಆತಂಕ ಮೂಡಿಸುವ ಮಾತುಗಳಲ್ಲ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri
Cooperatives are the backbone of common people, 14/02/2023
Cooperatives are the backbone of common people. ನೆಲಜಿ ದವಸ ಭಂಡಾರ ಶತಮಾನೋತ್ಸವ ಸಮಾರಂಭ
ನಾಪೋಕ್ಲು ಸಮೀಪದ 94ನೇ ನೆಲಜಿ ಸಹಕಾರ ದವಸ ಭಂಡಾರ ನಿಯಮಿತದ ಶತಮಾನೋತ್ಸವ ಸಮಾರಂಭ ಹಾಗೂ ನವೀಕೃತ ಕಟ್ಟಡ ಮತ್ತು ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭಿಕರನ್ನು ಉದ್ದೇಶಿಸಿ ಮಾತನಾಡಿದೆ.
ನೆಲಜಿ ಸಹಕಾರ ದವಸ ಭಂಡಾರ ಮಾಡಿರುವ, ಮಾಡುತ್ತಿರುವ ಕೆಲಸಗಳು ಸಹಕಾರಿ ಕ್ಷೇತ್ರದ ಯಶಸ್ಸಿಗೆ ಹಿಡಿದ ಕನ್ನಡಿಯಾಗಿದೆ. ಇದಕ್ಕೆ ಕಾರಣಕರ್ತರಾದ ನಿಯಮಿತದ ಎಲ್ಲಾ ಸದಸ್ಯರಿಗೂ ನನ್ನ ಅಭಿನಂದನೆಗಳು.
ಈ ಸಂದರ್ಭದಲ್ಲಿ ಭ್ರಷ್ಟಾಚಾರ ಹೇಗೆ ಮೇಲಿನಿಂದ ಕೆಳಗಿನ ಸ್ತರಕ್ಕೆ ಪಸರಿಸುತ್ತದೆ ಎಂಬುದರ ಬಗ್ಗೆ ವಿವರಿಸಿ, ಉನ್ನತ ಸ್ಥಾನದಲ್ಲಿ ಇರುವವರು ಸಮಾಜಕ್ಕೆ ಮೇಲ್ಪಂಕ್ತಿ ಆಗಬೇಕು ಎಂಬುವ ವಿಚಾರ ತಿಳಿಸಿದೆ. ಮೈಸೂರಿನ ಕಾಫಿ ಸೊಸೈಟಿಯ ಉದಾಹರಣೆಯನ್ನು ಕೊಟ್ಟು ಹೇಗೆ ನಾನು ಹೆಚ್ಚುವರಿ ಅಡ್ವೊಕೇಟ್ ಜನೆರಲ್ ಆಗಿದ್ದಾಗ ಅಲ್ಲಿ ನಡೆಯಬಹುದಾಗಿದ್ದ ಅನಾಹುತ ತಪ್ಪಿಸಿದೆ ಎಂದು ವಿವರಿಸಿದೆ. ಸಹಕಾರ ಕ್ಷೇತ್ರ ಅಧಿಕಾರಿಗಳ ಹಸ್ತಕ್ಷೇಪವನ್ನು ಕಾನೂನು ರೀತಿ ತಡೆಯಬೇಕು ಎಂದು ತಿಳಿಸಿದೆ.
ಇಪ್ಪತ್ತು ವರ್ಷಗಳ ಹಿಂದೆ ಸಂವಿಧಾನಕ್ಕೆ ತಿದ್ದುಪಡಿ ತಂದು ಸಹಕಾರ ಸಂಘಟನೆ ಮಾಡುವುದನ್ನು ಮೂಲಭೂತ ಹಕ್ಕನ್ನಾಗಿ ಮಾಡಿರುವ ಬಗ್ಗೆ ವಿವರಿಸಿ ನಮ್ಮ ಈ ಮೂಲಭೂತ ಹಕ್ಕನ್ನು ಕಾಪಾಡಿಕೊಳ್ಳಬೇಕಾದ ಅವಶ್ಯಕತೆ ಬಗ್ಗೆ ಮಾತನಾಡಿದೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Bhagamandala #Murnad #Mythadi #MBadaga #Parane #Arameri #Hundi #Kaveri #Talacauvery #Siddapura #Hudikeri #Napoklu #Birunani #KiggatNad #Pannagalathamme #Mayamudi #Kadanga #Begur #Gonikoppa Arvathoklu #Shivakeri #Talakaveri #KodavaSong #Kutta #Nalkeri
