62nd Parane Sports Festival 2022, 21/11/2022

62nd Parane Sports Festival 2022. 62ನೇ ಪಾರಾಣೆ ಕ್ರೀಡಾ ಹಬ್ಬ 2022
 
ನಾಪೋಕ್ಲು ಪಾರಾಣೆಯ ಪಾರಾಣೆ ಕ್ರೀಡಾಮಂಡಲಿ ಆಯೋಜಿಸಿದ್ದ ಅಂತರ-ಗ್ರಾಮ ಪಾರಾಣೆ ಕ್ರೀಡಾಕೂಟ 2022ರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡ ಸಂದರ್ಭ. ಸತತ 62 ವರ್ಷ ಈ ಕ್ರೀಡಾಕೂಟಗಳನ್ನು ನಡೆಸಿಕೊಂಡು ಬಂದಿರುವುದು ಒಂದು ಮಹತ್ತರ ಸಾಧನೆಯೇ ಸರಿ.
 
ಗ್ರಾಮೀಣ ಮಟ್ಟದಲ್ಲಿ ಸ್ಪರ್ಧಾತ್ಮಕ ಕ್ರೀಡಾಕೂಟಗಳನ್ನು ನಡೆಸುವ ಪರಂಪರೆ ಇರುವ ಕಾರಣಕ್ಕೆ ಕೊಡಗಿನಿಂದ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರಹೊಮ್ಮಿದ್ದಾರೆ.
 
ನೆರೆದಿದ್ದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿ ಅವರಿಗೆ ಶುಭಕೋರಿದೆ. ಆಯೋಜಕರ ಕೆಲಸವನ್ನು ಅಭಿನಂದಿಸಿ ಇದೇ ಸಂದರ್ಭದಲ್ಲಿ ನನ್ನ ಕಡೆಯಿಂದ ವೈಯಕ್ತಿಕವಾಗಿ ದತ್ತಿನಿಧಿಯನ್ನು ಆಯೋಜಕರಿಗೆ ಹಸ್ತಾಂತರ ಮಾಡಿದೆ. ಕ್ರೀಡಾ ಮನೋಭಾವದಿಂದ ಕೂಟದಲ್ಲಿ ಪಾಲ್ಗೊಂಡ ಎಲ್ಲಾ ಪಟುಗಳಿಗೂ, ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಿದ ಮಂಡಳಿಯ ಪದಾಧಿಕಾರಿಗಳಿಗೂ ಶುಭಾಶಯಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #Parane #Sports #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura
 
 
img
 

Rs.4 Lakh grant to Hudikeri Kodava Samaja, 19/11/2022

Rs.4 Lakh grant to Hudikeri Kodava Samaja. ಹುದಿಕೇರಿ ಕೊಡವ ಸಮಾಜಕ್ಕೆ ರೂ.4 ಲಕ್ಷ ಅನುದಾನ
 
ಸಮಾಜದ ಒಳಿತಿಗಾಗಿ ಅವಿರತ ಶ್ರಮಿಸುತ್ತಿರುವ ಹುದಿಕೇರಿಯ ಕೊಡವ ಸಮಾಜಕ್ಕೆ ಅವರ ಅಭಿವೃದ್ಧಿ ಕೆಲಸದಲ್ಲಿ ನೆರವಾಗಲು ರೂ.4 ಲಕ್ಷ ಅನುದಾನವನ್ನು ವೈಯಕ್ತಿಕವಾಗಿ ನೀಡಲಾಗಿದೆ. ಸಮಾಜದ ಅಧ್ಯಕ್ಷರಾದ ಮೀದೇರಿರ ನವೀನ್ ಮತ್ತು ಆಡಳಿತ ಮಂಡಳಿಯ ಇತರೇ ಸದಸ್ಯರ ಸಮ್ಮುಖದಲ್ಲಿ ಚೆಕ್ ಮೂಲಕ ಅನುದಾನ ಹಸ್ತಾಂತರ ಮಾಡಲಾಯಿತು.
 
ಸಮಾಜ ಕಟ್ಟುವ ಕೆಲಸ ಎಲ್ಲರಿಂದಲೂ ಆಗಬೇಕು. ಈ ನಿಟ್ಟಿನಲ್ಲಿ ಹುದಿಕೇರಿಯ ಕೊಡವ ಸಮಾಜ ಹಾಕಿಕೊಂಡಿರುವ ಎಲ್ಲಾ ಯೋಜನೆಗಳು, ಅಭಿವೃದ್ಧಿಯ ಕೆಲಸಗಳು ಫಲಕಾರಿಯಾಗಲಿ ಎಂದು ಹಾರೈಸುತ್ತೇನೆ. ಆಡಳಿತ ಮಂಡಳಿ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಳ್ಳಲಿ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #CHIC #ChildrensDay #Pollibetta #Devapura
 
 
img
 

Kannada Rajyothsava function at Gonikoppa, 19/11/2022

Kannada Rajyothsava function at Gonikoppa. ಗೋಣಿಕೊಪ್ಪದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ
 
ಗೋಣಿಕೊಪ್ಪದ ಪ್ರಗತಿ ಆಟೋ ಚಾಲಕರ, ಮಾಲೀಕರ ಸಂಘದ ವತಿಯಿಂದ ಸ್ಥಳೀಯ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದ ಅದ್ದೂರಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿದ ಸಂದರ್ಭ. ಸದಸ್ಯರ ಹಿತಾಸಕ್ತಿಯೊಂದಿಗೆ ಈ ರೀತಿ ಸಮಾಜದ, ನಮ್ಮ ಬಾಷೆ, ಕಲೆ, ಸಂಸ್ಕೃತಿಯನ್ನು ಕಾಪಾಡುವ, ಸಂಭ್ರಮಿಸುವ ಕಾರ್ಯಗಳಲ್ಲೂ ಸಂಘ ಸಕ್ರಿಯವಾಗಿರುವುದು ಶ್ಲಾಘನೀಯ.
 
ಕಾರ್ಯಕ್ರಮವನ್ನು ಒಂದು ಸಾಂಸ್ಕೃತಿಕ ಹಬ್ಬವಾಗಿ ಆಯೋಜಿಸಿದ್ದ ಸಂಘದ ಅಧ್ಯಕ್ಷರಾದ ಮಲ್ಲಂಡ ಪ್ರಕಾಶ್, ಆಡಳಿತ ಮಂಡಳಿಗೂ, ವ್ಯವಸ್ಥಾಪಕರಿಗೂ, ಹಾಗೂ ಎಲ್ಲಾ ಸದಸ್ಯರಿಗೂ ಅಭಿನಂದನೆಗಳು. ಈ ಕಾರ್ಯಕ್ರಮಕ್ಕೆ ನಾನು ಕೈಜೋಡಿಸಿದ್ದು ಮತ್ತು ಭಾಗವಹಿಸಿದ್ದು ನನ್ನ ಸೌಭಾಗ್ಯ ಎಂದು ಭಾವಿಸುತ್ತೇನೆ. ಮುಂದಿನ ದಿನಗಳಲ್ಲಿ ಕೂಡ ಸಂಘದಿಂದ ಇನ್ನಷ್ಟು ಸಮಾಜಮುಖಿ ಕಾರ್ಯಗಳು ಜರುಗಲಿ ಎಂದು ಹಾರೈಸುತ್ತೇನೆ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #CHIC #ChildrensDay #Pollibetta #Devapura
 
 
img
 

Wonderful time with children in Devarapura, 18/11/2022

Wonderful time with children in Devarapura. ದೇವರಪುರದಲ್ಲಿ ಮಕ್ಕಳ ಜೊತೆ ಕಳೆದ ಸುಂದರ ಸಮಯ
 
ದೇವಾಪುರದಲ್ಲಿ ಮಕ್ಳಳ ಜೊತೆ ಸಮಯ ಕಳೆದಿದ್ದು ಒಂದು ಅದ್ಭುತ ಅನುಭವ. ಅಲ್ಲಿನ ಸಿಬ್ಬಂದಿ ಇಲ್ಲಿನ ಮಕ್ಕಳಿಗೆ ಕೊಡುವ ಶಿಕ್ಷಣದ ಬಗ್ಗೆ ವಿವರಿಸಿದರು. ಅವರ ಶ್ರದ್ಧೆ ಹಾಗೂ ಸೇವಾ ಮನೋಭಾವ ಎಲ್ಲರಿಗೂ ಸ್ಫೂರ್ತಿ ತರುವಂತಹುದು. ಅವರೆಲ್ಲರಿಗೂ ಶುಭ ಕೋರಿ ಅಭಿನಂದಿಸಿದೆ. ಮುಂದಿನ ದಿನಗಳಲ್ಲಿ ಅವರ ಸೇವೆ ಇನ್ನಷ್ಟು ಮಕ್ಕಳಿಗೆ ತಲುಪಲಿ ಎಂದು ಹಾರೈಸಿದೆ.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Begur #Chiniwada #Gonikoppal #Shivakeri #Talakaveri #Chennayyanakote #CHIC #ChildrensDay #Pollibetta #Devapura
 
 
img
 

Medical equipment for Kodagu hospital, 16/11/2022

Medical equipment for Kodagu hospital. ಕೊಡಗಿನ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ಕೊಡುಗೆ
 
ಅಮ್ಮತ್ತಿಯ ಇಂಡಿಯಾ ಹೆಲ್ತ್ ಪ್ರಾಜೆಕ್ಟ್ ಹಾಸ್ಪಿಟಲ್'ನಲ್ಲಿ ನೂತನವಾಗಿ ನಿರ್ಮಾಣವಾದ ಡಯಾಲಿಸಿಸ್ ಮತ್ತು ದಂತ ಚಿಕಿತ್ಸಾ ಘಟಕಗಳ ಉದ್ಘಾಟನೆಯಲ್ಲಿ ಪಾಲ್ಗೊಂಡ ಸಂದರ್ಭ. ಈ ಘಟಕಕ್ಕೆ ವೈದ್ಯಕೀಯ ಉಪಕರಣ ಒಂದನ್ನು ಕೊಡುಗೆಯಾಗಿ ಕೊಡಲಾಗಿದೆ.
 
ಜನರಿಗೆ ವೈದ್ಯಕೀಯ ಸೌಲಭ್ಯಗಳ ಅಗತ್ಯ ಹಿಂದೆಂದಿಗಿಂತಲೂ ಈಗ ಅವಶ್ಯಕತೆ ಹೆಚ್ಚಾಗಿದೆ. ಎಲ್ಲರೂ ಕೈಜೋಡಿಸಿದರೆ ಸೌಲಭ್ಯಗಳನ್ನು ಕಲ್ಪಿಸಬಹುದು. ಡಯಾಲಿಸಿಸ್ ಘಟಕವನ್ನು ಉದ್ಘಾಟನೆ ಮಾಡಿ ಆಸ್ಪತ್ರೆಯ ಟ್ರಸ್ಟ್ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದೆ.
 
ಈ ಸಂದರ್ಭದಲ್ಲಿ, ಇತರ ದಾನಿಗಳಾದ ಶ್ರೀ ಪೂರ್ಣಚಂದ್ರ ರಾವ್ (Heavenly Hills Resort), ಕೆ.ಎ. ಕುಶಾಲಪ್ಪ (Rebuild Kodagu) ಮತ್ತು ಕೊಡಂದೆರ ಸುಬ್ಬಯ್ಯ (East End Group) ಜೊತೆಗಿದ್ದರು. ಟ್ರಸ್ಟಿಗಳಾದ ಡಾ| ಎಂ.ಎಂ.ಚಂಗಪ್ಪ, ಡಾ|ಪಿ.ಜಿ.ಚಂಗಪ್ಪ, ವೈದ್ಯಾಧಿಕಾರಿ ಡಾ| ಚಂದ್ರು ಮುಂತಾದವರು ಹಾಜರಿದ್ದರು. ಎಲ್ಲಾ ದಾನಿಗಳಿಗೂ ಅಭಿನಂದನೆಗಳು. ಜನಸೇವೆಯಲ್ಲಿ ಟ್ರಸ್ಟ್ ನಡೆಸುತ್ತಿರುವ ಟ್ರಸ್ಟಿಗಳಿಗೂ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಎಲ್ಲರಿಗೂ ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Ammathi #Begur #Chiniwada #Gonikoppal #Shivakeri #Talakaveri #Chennayyanakote #CHIC #CheshireHomes #Pollibetta