Enrolment drive in Ponnampet, 21/03/2022
ಪೊನ್ನಂಪೇಟೆ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೂತನ ಸದಸ್ಯರನ್ನು ದಾಖಲು ಮಾಡುವ ಸಲುವಾಗಿ ನೋಂದಣಿಗಾರರು ಮತ್ತು ಮುಖ್ಯ ನೋಂದಣಿಗಾರರ (Enrollers and Master Enrollers) ಜೊತೆಯಲ್ಲಿ ಸಭೆ ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಯಾವ ರೀತಿ ಸದಸ್ಯತ್ವ ನೋಂದಣಿ ನದಸಬೇಕು ಎನ್ನುವುದರ ಕುರಿತು ಮತ್ತು ಯಾವ ರೀತಿಯ ಕ್ರಮಗಳ ಅವಶ್ಯಕತೆ ಇದೆ ಎನ್ನುವುದರ ಕುರಿತು ಚರ್ಚಿಸಲಾಯಿತು. ಪಕ್ಷದ ಸಂಘಟನೆಯನ್ನು ಇನ್ನಷ್ಟು ಗಟ್ಟಿಮಾಡುವ ನಿಟ್ಟಿನಲ್ಲಿ ಎನ್ರೋಲರ್ಸ್ಗ್'ಗಳ ಪಾತ್ರ ಬಹಳ ಮಹತ್ವದ್ದು.
#Kodagu #Virajpet #Madikeri #Ponnampet
Discussion with Scheduled Tribes of Thithimathi, 20/03/2022
ಕೊಡಗು ಜಿಲ್ಲೆಯ ತಿತಿಮತಿ ಗ್ರಾಮದಲ್ಲಿ ದಟ್ಟವಾದ ಕಾಡು ಪ್ರದೇಶದಲ್ಲಿ ವಾಸವಾಗಿರುವ ಪರಿಶಿಷ್ಟ ಪಂಗಡದ ಜನಾಂಗ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚೆಮಾಡಲು ಅವರ ವಾಸಸ್ಥಳಗಳಿಗೆ ಭೇಟಿ ಮಾಡಿದೆ.
ಮುಂದಿನ ದಿನಗಳಲ್ಲಿ ಸರ್ಕಾರದ ಮಟ್ಟದಲ್ಲಿ, ಉಚ್ಚ ನ್ಯಾಯಾಲಯ, ಸರ್ವೋಚ್ಚ ನ್ಯಾಯಾಲಯಗಳ ಮಟ್ಟದಲ್ಲಿ ಯಾವ ರೀತಿಯಲ್ಲಿ ಅವರ ಸಮಸ್ಯೆಗಳಿಗೆ ಪರಿಹಾರ ತರಬಹುದು ಎಂಬುದರ ಕುರಿತಾಗಿ ಚರ್ಚೆ ನಡೆಸಲಾಯಿತು.
#Kodagu #Virajpet #Madikeri #Ponnampet #Thithimathi
All-party meet on Karnataka's river water disputes, 18/03/2022
#Kaveri #Cauvery #Krishna #Mahadayi #Mekedatu #Kodagu #Ponnampet #Madikeri #Virajpet



Interview with Kodava Kootaliyaada Koota, 12/03/2022
ಕೊಡವ ಕೂಟಾಳಿಯಡ ಕೂಟದವರ ಯೂಟ್ಯೂಬ್ ಚಾನೆಲ್'ನಲ್ಲಿ ನನ್ನದೊಂದು ಸಂದರ್ಶನ ಇತ್ತೀಚೆಗೆ ಪ್ರಸಾರವಾಗಿದೆ. ಇದರಲ್ಲಿ ಹಲವಾರು ವಿಷಯಗಳ ಬಗ್ಗೆ ನನ್ನ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದೇನೆ. ಸಂದರ್ಶಕರು, ತಾಂತ್ರಿಕ ವರ್ಗದವರು ಮತ್ತು ಕೊಡವ ಕೂಟಾಳಿಯಡ ಕೂಟದವರಿಗೂ ನನ್ನ ಧನ್ಯವಾದಗಳು.
#Kodagu #Coorg #Madikeri #Virajpet #Ponnampet #KodavaKootaliyaadaKoota
Poverty and disparity are the biggest threats to the progress of this great nation, 10/03/2022
