Scholarship for girl students of Kodagu, in 2022, 18/08/2022
ಎ.ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿರುವ ಕಾರ್ಯಕ್ರಮಗಳಲ್ಲಿ, ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ಒದಗಿಸುವುದು ಒಂದಾಗಿದೆ. ಇದಕ್ಕೆ ಕಳೆದ ವರ್ಷವೇ ಚಾಲನೆ ಸಿಕ್ಕಿದೆ.
ಈ ವರ್ಷವೂ ಕೂಡ ಶಕ್ತಿ ದಿನಪತ್ರಿಕೆ ಹಾಗೂ ಇ-ವಿದ್ಯಾ ಸಂಸ್ಥೆಗಳ ಸಹಯೋಗದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈಗಾಗಲೇ ಮೊದಲ ವರ್ಷದ ಡಿಗ್ರಿ ಪದವಿಗೆ ಪ್ರವೇಶ ಪಡೆದಿರುವ ವಿದ್ಯಾರ್ಥಿನಿಯರು ಆರ್ಜಿ ಹಾಕಬಹುದು.
ಆರ್ಥಿಕವಾಗಿ ದುರ್ಬಲ ಹಿನ್ನೆಲೆಯಿಂದ ಬಂದ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಮೂರು ವರ್ಷಗಳ ಕಾಲ, ವರ್ಷಕ್ಕೆ ತಲಾ ರೂ.10,000 ವಿದ್ಯಾರ್ಥಿ ವೇತನ ಕೊಡಲಾಗುವುದು.
ನಿಮ್ಮ ಅರ್ಜಿಯೊಂದಿಗೆ ಕುಟುಂಬದ ಆದಾಯ ಪ್ರಮಾಣಪತ್ರ, ಎರಡನೇ ಪಿ.ಯು. ಅಂಕಪಟ್ಟಿ ಮತ್ತು ಈಗ ಸೇರಿರುವ ಕಾಲೇಜಿನ ವಿವರಗಳನ್ನು ತಪ್ಪದೆ ಲಗತ್ತಿಸಿ.
ಇದೇ ತಿಂಗಳ 23ರ ಒಳಗೆ ಅರ್ಜಿಗಳನ್ನು Shakthidaily@gmail.com ಕ್ಕೆ, ಅಥವಾ ಅಂಚೆ ಮೂಲಕ ವ್ಯವಸ್ಥಾಪಕರು, ಶಕ್ತಿ ದಿನಪತ್ರಿಕೆ, ಇಂಡಸ್ಟ್ರಿಯಲ್ ಟೌನ್, ಮಡಿಕೇರಿ, ಇಲ್ಲಿಗೆ ಕಳುಹಿಸಬಹುದು. ಆಯ್ಕೆಯಾದ ವಿದ್ಯಾರ್ಥಿಗಳಿಗೆ 26ನೇ ತಾರೀಕು ತಿಳಿಸಲಾಗುವುದು. 27ನೇ ತಾರೀಕು ವಿದ್ಯಾರ್ಥಿವೇತವ ವಿತರಿಸುವ ಕಾರ್ಯಕ್ರಮವಿರುತ್ತದೆ.
ಇಂತಿ
ಎ. ಎಸ್.ಪೊನ್ನಣ್ಣ
ವ್ಯವಸ್ಥಾಪಕ ಟ್ರಸ್ಟೀ
ಎ.ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery
ಎ. ಎಸ್.ಪೊನ್ನಣ್ಣ
ವ್ಯವಸ್ಥಾಪಕ ಟ್ರಸ್ಟೀ
ಎ.ಕೆ.ಸುಬ್ಬಯ್ಯ - ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್

Visit to rain-damaged house on Madikeri Road, Bhagamandala, 18/08/2022
ಮಳೆಹಾನಿ ಇಂದಾಗಿ ಮನೆ ಕುಸಿತಗೊಂಡ ಭಾಗಮಂಡಲ ಮಡಿಕೇರಿ ರಸ್ತೆಯಲ್ಲಿರುವ ಮನೆಗೆ ಭೇಟಿ ನೀಡಿದ ಸಂದರ್ಭ.
ಕೊಡಗಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯ ಕಾರಣ ಸಾರ್ವಜನಿಕ ರಸ್ತೆ ಮುಂತಾದ ಮೂಲಸೌಕರ್ಯದ ಜೊತೆಗೆ ಖಾಸಗಿ ಮನೆಗಳಿಗೂ ಭಾರಿ ಹಾನಿಯಾಗಿದೆ.
ಆಡಳಿತ ಚುರುಕಾಗಿ ಸಂತ್ರಸ್ತರ ಸಹಾಯಕ್ಕೆ ಬರಬೇಕಿದೆ. ಅದನ್ನು ನಾನು ಒತ್ತಯಾ ಮಾಡುತ್ತಲೇ, ನನ್ನ ಕೈಲಾದ ಸಹಾಯವನ್ನು ಸಂತ್ರಸ್ತರಿಗೆ ಒದಗಿಸುವ ಪ್ರಯತ್ನ ಮಾಡಿದ್ದೇನೆ. ಕಾವೇರಿ ತಾಯಿ ಎಲ್ಲರ ಮೇಲೆ ಕರುಣೆ ತೋರಲಿ ಎಂದು ಬೇಡುತ್ತೇನೆ.
#JaiHind #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Visit to the house damaged in rain at Chettimani, 17/08/2022
ಚೆಟ್ಟಿಮಾನಿ ಬಳಿ ಮಳೆಯಿಂದ ಮನೆ ಕುಸಿತವಾದ ಸ್ಥಳಕ್ಕೆ ಭೇಟಿ ನೀಡಿದ ಸಂಧರ್ಭ. ಕೊಡಗು ಜಿಲ್ಲೆಯ ವಿವಿಧ ಕಡೆ ಭಾರಿ ಮಳೆಯಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ.
ಕೊಡಗಿನ ಬಗ್ಗೆ ಆಡಳಿತದ ನಿರ್ಲಕ್ಷ್ಯ ಮುಂದುವರೆದಿದೆ. ವೈಯಕ್ತಿಕವಾಗಿ ನಾನು ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಜನರ ಸಹಾಯಕ್ಕೆ ಮುಂದಾಗಿದ್ದೇವೆ. ಆದರೆ ಸರ್ಕಾರದ ನಿರ್ಲಕ್ಷ್ಯ ನಮಗೆ ಬೇಸರ ತಂದಿದೆ.
ಹೋರಾಟಕ್ಕೆ ಮಾತ್ರ ಮಣಿಯುವ ಮೊಂಡತನ ಆಡಳಿತ ತೋರುತ್ತಿದೆ. ಜನರ ಆಕ್ರೋಶಕ್ಕೆ ಗುರಿಯಾಗದೆ ನೊಂದ ಜನರ ಸಹಾಯಕ್ಕೆ ಮುಂದಾಗುವಂತೆ ನಮ್ಮ ಒತ್ತಾಯ, ಹೋರಾಟ ಮುಂದುವರೆದಿದೆ.
#JaiHind #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Floods #Rains #Landslides

Celebrating 75 Years of Indian Independence, 16/08/2022
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆಂದೇ ಸ್ಥಾಪನೆಯಾದ ಪಕ್ಷ ನಮ್ಮದು. ಲಕ್ಷಾಂತರ ಜನರನ್ನು ಒಗ್ಗೂಡಿಸಿ, ಅವರಲ್ಲಿ ದೇಶಪ್ರೇಮವನ್ನು ಬಿತ್ತಿ, ಹೋರಾಟದಿಂದ ಪಡೆದ ಸ್ವಾತಂತ್ರ್ಯ ನಮ್ಮದು. ಕಳೆದ 75 ವರ್ಷಗಳಿಂದ ಈ ಸ್ವಾತಂತ್ರ್ಯವನ್ನು ಪ್ರತಿಯೊಬ್ಬ ಪ್ರಜೆಯ ಏಳಿಗೆಗೆ ಸದ್ಬಳಕೆ ಮಾಡುವ ಕೆಲಸ ನಿರಂತರವಾಗಿ ನಡೆದಿದೆ.
ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು ಪಕ್ಷವು ಅದ್ದೂರಿಯಾಗಿ ಸಂಭ್ರಮಿಸಿ, ದೇಶಕ್ಕೆ ಮಾದರಿಯಾಯಿತು. ಸಂಗೊಳ್ಳಿ ರಾಯಣ್ಣ ವೃತ್ತ-ಫ್ರೀಡಂ ಪಾರ್ಕ್ ಇಂದ ಆರಂಭವಾಗಿ ಸ್ವಾತಂತ್ರ್ಯ ನಡಿಗೆ ನ್ಯಾಷನಲ್ ಕಾಲೇಜ್ ಮೈದಾನದವರೆಗೂ ಚಾಚಿತ್ತು. ಒಂದು ಲಕ್ಷಕ್ಕೂ ಹೆಚ್ಚು ಜನ ಪಾಲ್ಗೊಂಡು, ಸ್ವಾತಂತ್ರ್ಯ ನದಿಗೆಯನ್ನು ಯಶಸ್ವಿ ಮಾಡಿದರು.
ಕೊಡಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದ ಬೆಂಬಲಿಗರು, ಮುಖಂಡರು, ಹಿತೈಷಿಗಳು ನಡಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷ. ನಡಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಶುಭಾಶಯಗಳು.
ಸ್ವಾತಂತ್ರ್ಯ ಒಂದೇ ದಿನದ ಸಂಭ್ರಮವಲ್ಲ. ಪ್ರತಿದಿನವೂ ನಮ್ಮ ಹಿಂದಿನವರ ತ್ಯಾಗ ಬಲಿದಾನ ನೆನೆಯುತ್ತ, ಸ್ವಾತಂತ್ರ್ಯವನ್ನು ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ.
#IndependenceDay2022 #JaiHind #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery

Let's pledge to protect our freedom on #IndependenceDay2022, 15/08/2022
On the 75th anniversary of our #TrystWithDestiny let's pledge to protect our freedom on #IndependenceDay2022
ಸ್ವಾತಂತ್ರ್ಯದ ಅಮೃತ ಮಹೋತ್ಸವದಂದು ನಮ್ಮೆಲ್ಲರ ಸಾಂವಿಧಾನಿಕ ಸ್ವಾತಂತ್ರ್ಯವನ್ನು ರಕ್ಷಿಸುವ, ದೇಶದ ಸಂವಿಧಾನವನ್ನು ಕಾಪಾಡುವ, ಜನರ ನಿಜವಾದ ಹಕ್ಕುಗಳನ್ನು ಪ್ರತಿಪಾದಿಸುವ ಸಂಕಲ್ಪವನ್ನು ಮಾಡೋಣ. #JaiHind
