HC notice on delay in Virajpet town Panchayat election, 20/07/2022
ವಿರಾಜಪೇಟೆ ಪಟ್ಟಣ ಪಂಚಾಯ್ತಿ ಸ್ಥಾಯಿ ಸಮಿತಿ ಚುನಾವಣೆಯನ್ನು ವಿನಾಕಾರಣ ಮುಂದೂಡುತ್ತಾ ಬಂದಿರುವ ಸಿ.ಎಂ.ಸಿ ಕಮಿಷನರ್ ಅವರ ಕ್ರಮವನ್ನು ಪ್ರಶ್ನಿಸಿ ಪಂಚಾಯಿತಿ ಸದಸ್ಯರಾದ ರಂಜಿತ್ ಪೂಣಚ್ಚ ಮತ್ತು ಇತರರು ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿ ಮಂಗಳವಾರ ವಿಚಾರಣೆಗೆ ಬಂದಿತ್ತು.
ಪ್ರತಿವಾದಿಗಳಾದ ವಿರಾಜಪೇಟೆ ಪಟ್ಟಣ ಪಂಚಾಯಿತಿ ಕಮಿಷನರ್, ಕೊಡಗು ಜಿಲ್ಲೆ ಜಿಲ್ಲಾಧಿಕಾರಿಗಳು ಮತ್ತು ಇತರರಿಗೆ ಉಚ್ಚ ನ್ಯಾಯಾಲಯ ತುರ್ತು ನೋಟಿಸನ್ನು ಜಾರಿಮಾಡಿದೆ.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Ajjikuttira family gathering in Bengaluru, 18/07/2022
ಅಜ್ಜಿಕುಟ್ಟೀರ ಕುಟುಂಬದ ಬೆಂಗಳೂರು ಭಾಗದವರು ತಮ್ಮ ವಾರ್ಷಿಕ ಉತ್ಸವವನ್ನು ಆಚರಣೆ ಮಾಡಿದರು. ಕುಟುಂಬದ ಎಲ್ಲಾ ಹಿರಿಯ ಸದಸ್ಯರು, ಅಧ್ಯಕ್ಷರು, ಮಕ್ಕಳು, ಎಲ್ಲರೂ ಸೇರಿ ಭಾರಿ ವಿಜೃಂಭಣೆಯಿಂದ ಕಾರ್ಯಕ್ರಮವನ್ನು ನಡೆಸಿದರು.
ನನ್ನ ಒಂದು ಕಿರು ಪರಿಚಯವನ್ನು ಎಲ್ಲರಿಗೂ ಮಾಡಿದ ಅಧ್ಯಕ್ಷರಿಗೆ, ಪದಾಧಿಕಾರಿಗಳಿಗೆ, ಕುಟುಂಬದ ಹಿರಿಯರಿಗೆ ಮತ್ತು ಕಾರ್ಯಕ್ರಮದಲ್ಲಿ ಸೇರಿ ಭಾಗವಹಿಸಿದಂತ ಎಲ್ಲಾ ನನ್ನ ಬಂಧು-ಬಳಗದವರಿಗೆ ನನ್ನ ವಂದನೆಗಳು.
ಬಹಿರಂಗವಾಗಿ ನೀವು ನನಗೆ ಸೂಚಿಸಿದ ಬೆಂಬಲಕ್ಕೆ ನಾನು ಎಂದೆಂದಿಗೂ ಚಿರಋಣಿಯಾಗಿರುತ್ತೇನೆ. ಈ ಪ್ರೀತಿ ವಿಶ್ವಾಸ, ಸಹಕಾರ, ನೆರವು, ಆಶೀರ್ವಾದ ಸದಾಕಾಲ ಇದೇ ರೀತಿ ಇರಲಿ ಎಂದು ಕೂಡ ಆಶಿಸುತ್ತೇನೆ.
ಕುಟುಂಬದ ಅಧ್ಯಕ್ಷರಾದ ಶ್ರೀ ಅಜ್ಜಿಕುಟ್ಟೀರ ಕೇಶು, ಕಾರ್ಯಾಧ್ಯಕ್ಷರಾದ ಡಾ.ಗಣಪತಿ, ಕಾರ್ಯದರ್ಶಿಗಳಾದ ಶ್ರೀ ಸುನಿಲ್ ಸುಬ್ಬಯ್ಯ, ಖಜಾಂಜಿಗಳಾದ ಶ್ರೀ ಎ. ಪಿ.ಕಾರಿಯಪ್ಪ, ಸಮಿತಿಯ ಸದಸ್ಯರುಗಳಾದ ಶ್ರೀ ಸುಧೀರ್, ಶ್ರೀ ಮಧು, ಶೀ ದಿಲನ್, ಶ್ರೀ ರೋಹನ್ ಮತ್ತು ಶ್ರೀಮತಿ ಸಂಧ್ಯಾ ಹಾಗೂ ಕುಟುಂಬದ ಎಲ್ಲಾ ಹಿರಿಯರು ಹಾಗೂ ಸದಸ್ಯರಿಗೆ ನಾನು ಆಭಾರಿ.
#Ajjikuttira #Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Justice for advocate Praveen Gowda, 15/07/2022
ವಕೀಲ ಮಿತ್ರರು ಹಾಗೂ ಕರ್ನಾಟಕ ಪ್ರದೇಶ ಕಾನೂನು ಘಟಕದ ಸಹೋದ್ಯೋಗಿ, ಪ್ರವೀಣ್ ಗೌಡ ಅವರ ಮೇಲೆ ನಡೆದಂತ ಹಲ್ಲೆ ಹಾಗೂ ನಂತರ ಪೊಲೀಸ್ ನಿರ್ಲಕ್ಷ್ಯದ ವಿರುದ್ಧ ಶುಕ್ರವಾರ ವಕೀಲರ ಸಂಘ, ಬೆಂಗಳೂರು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದೆ.
ಈ ಕೂಡಲೇ ಘಟನೆಯನ್ನು ನಿರ್ಲಕ್ಷ ಮಾಡಿರುವ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಮಾನತ್ತಿನಲ್ಲಿ ಇಟ್ಟು ಸೂಕ್ತವಾದ ಇಲಾಖಾ ವಿಚಾರಣೆಯನ್ನು ನಡೆಸಬೇಕು ಎಂದು ಒತ್ತಾಯ ಮಾಡಲಾಯಿತು. ಈ ಸಂಧರ್ಭದಲ್ಲಿ ನನ್ನೊಂದಿಗೆ ಇದ್ದಂತ ಎಲ್ಲಾ ವಕೀಲ ಮಿತ್ರರಿಗೆ ಧನ್ಯವಾದಗಳು.
#Advocates #Bengaluru #Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Meeting with MLC Dr. D Thimmaiah, 13/07/2022
ಮಾನ್ಯ ವಿಧಾನ ಪರಿಷತ್ ಸದಸ್ಯರಾದ ಶ್ರೀ ಡಿ ತಿಮ್ಮಯ್ಯನವರನ್ನು ಭೇಟಿ ಮಾಡಿದ ಸಂಧರ್ಭ.
ನನ್ನ ಹುಟ್ಟುಹಬ್ಬಕ್ಕೆ ನನ್ನನ್ನು ಹರಸಲು ಮಂಗಳವಾರ ನನ್ನ ಕಚೇರಿಗೆ ಬಂದಿದ್ದ ಮಾನ್ಯ ತಿಮ್ಮಯ್ಯ ಅವರೊಂದಿಗೆ ಹಲವಾರು ವಿಷಯಗಳ ಬಗ್ಗೆ ಚರ್ಚೆ ಕೂಡ ನಡೆಸುವ ಅವಕಾಶ ಒದಗಿಬಂತು.
ಸಹೃದಯಿ ಮತ್ತು ಜನಪರ ನಿಲುವುಳ್ಳ ರಾಜಕಾರಣಿಯಾದ ತಿಮ್ಮಯ್ಯ ಅವರಿಗೆ ನನ್ನ ಧನ್ಯವಾದಗಳು.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje

Visit to earthquake-affected regions, 11/07/2022
ಭೂಕಂಪದಿಂದ ಸಂಕಷ್ಟ ಎದುರಿಸುತ್ತಿರುವ ಚಂಬು ಗ್ರಾಮಕ್ಕೆ ಭೇಟಿ ನೀಡಿ ಸ್ಥಳೀಯರಿಗೆ ಬೇಕಾದ ತುರ್ತು ಪರಿಹಾರದ ಬಗ್ಗೆ ಪರಿಶೀಲನೆ ನಡೆಸಿದೆ.
ಕೆಲದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲಿನ ಜನರ ಬದುಕು ಕಷ್ಟವಾಗಿದೆ. ಅದಲ್ಲದೆ ಭೂಕಂಪನದಿಂದ ಮನೆ ಕುಸಿದು ಅಮ್ಮಕ್ಕ ಎಂಬುವರ ನಿವಾಸ ಸಂಪೂರ್ಣ ಹಾನಿಗೀಡಾಗಿದ್ದು, ಅವರಿಗೆ ನೆರವು ಒದಗಿಸಲಾಗಿದೆ. ಸಂಬಂಧಪಟ್ಟ ಅಧಿಕಾರ ವರ್ಗ ಹಾಗೂ ಸರ್ಕಾರದ ಮಟ್ಟದಲ್ಲಿ ಈ ವಿಷಯ ಪ್ರಸ್ತಾಪಿಸಿ ಮತ್ತಷ್ಟು ಪರಿಹಾರ ಕೊಡಿಸುವ ಭರವಸೆ ನೀಡಿದ್ದೇನೆ.
ಈ ಸಂದರ್ಭದಲ್ಲಿ ಪೆರಾಜೆಗೆ ತೆರಳುವ ದಾರಿ ಮಧ್ಯ ಚಂಬು ಗ್ರಾಮದ ಬಾಲಂಬಿಯಲ್ಲಿ ಪಕ್ಷದ ಕಾರ್ಯಕರ್ತರು ನನ್ನನ್ನು ಭೇಟಿ ಮಾಡಿ ಗ್ರಾಮಸ್ಥರ ಹಕ್ಕು ಪತ್ರ ವಿಷಯದಲ್ಲಿ ಇದ್ದ ತಮ್ಮ ದುಗುಡವನ್ನು ಹೇಳಿಕೊಂಡಿದ್ದಾರೆ. ಇದಕ್ಕೆ ಪೂರಕವಾಗಿ ಸರ್ಕಾರದ ಮಟ್ಟದಲ್ಲಿ ಈ ಕುರಿತು ಚರ್ಚಿಸಿ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆಯನ್ನು ನೀಡಿದ್ದೇನೆ.
#Kodagu #Coorg #Madikeri #Virajpet #Kushalnagar #Gonikoppal #Ponnampet #Chembu #Sampaje
