Visit to Jagjivan Ram Women's Association, 04/07/2022
ಪೊನ್ನಂಪೇಟೆ ತಾಲೂಕಿನ ಶಿವಕಾಲೋನಿಯ ಜಗಜೀವನ್ ರಾಮ್ ಮಹಿಳಾ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಧರ್ಭ.
ನಮ್ಮ ದೇಶದಲ್ಲಿ ಮಹಿಳಾ ಶಕ್ತಿಯ ಪ್ರಾಮುಖ್ಯತೆ ಮತ್ತು ಈ ಮಹಿಳಾ ಶಕ್ತಿಯನ್ನು ಸಂಘಟಿತವಾಗಿ ಮುನ್ನಡೆಸುವ ಅನಿವಾರ್ಯತೆ ಎಲ್ಲಾ ಮಹಿಳೆಯರಲ್ಲೂ ಇದೆ.
ಜೊತೆಯಾಗಿ ಸೇರಿ, ಸಮಾಜದಲ್ಲಿರುವ ಲೈಂಗಿಕ ತಾರತಮ್ಯವನ್ನು ಸರಿಪಡಿಸಬೇಕಾದ ಹೋರಾಟ ಮಹಿಳೆಯರಿಂದಲೇ ಸಾಧ್ಯ. ಈ ಹೋರಾಟಗಳು ಮಹಿಳಾ ಸಂಘಟನೆಗಳಿಂದ ಸಾಧ್ಯ. ಇದಕ್ಕೆ ಯಶಸ್ಸು ಸಿಗಲಿ ಮತ್ತು ನನ್ನ ಎಲ್ಲಾ ಬೆಂಬಲ ಸಹಕಾರ ಇದೆ ಎನ್ನುವ ಮಾತನ್ನು ಹೇಳಿದೆ.
ಮಹಿಳಾ ಸಂಘಟನೆಗಳು ಮಹಿಳೆಯರಲ್ಲಿ ಕೌಶಲ್ಯ ತರಬೇತಿ, ಸ್ವಾವಲಂಬನೆ, ಉದ್ಯಮಶೀಲತೆ ಬೆಳೆಸುವ ಕೆಲಸ ಇನ್ನು ಹೆಚ್ಚು ಹೆಚ್ಚು ಮಾಡಬೇಕಿದೆ.
ಕೊಡಗಿನಲ್ಲಿ ಹಲವಾರು ಸಮುದಾಯಗಳು ಪ್ರಗತಿಯ ಕೆಳ ಹಂತಗಳಲ್ಲಿವೆ. ಮಹಿಳಾ ಸಂಘಟನೆಗಳ ಮೂಲಕ ಇವುಗಳನ್ನು ಮೇಲೆತ್ತುವ ಕೆಲಸ ನಡೆಯುತ್ತಿರುವುದು ಶ್ಲಾಘನೀಯ. ಈ ನಿಟ್ಟಿನಲ್ಲಿ ಜಗಜೀವನ್ ರಾಮ್ ಮಹಿಳಾ ಸಂಘದ ಕಾರ್ಯಕ್ರಮಗಳಿಗೆ ನನ್ನ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ.
#Kodagu #Coorg #Madikeri #Virajpet #Kushalnagar #Gonikoppal #Ponnampet #WomensAssociation

High Court strictures Govt and Anti-Corruption Bureau on handling of corruption cases , 01/07/2022
ಮೊನ್ನೆ ದಿನ ಕರ್ಣಾಟಕ ಉಚ್ಚ ನ್ಯಾಯಾಲಯದಲ್ಲಿ ಭ್ರಷ್ಟಾಚಾರ ಪ್ರಕರಣ ಒಂದನ್ನು ವಿಚಾರಣೆ ನಡೆಸುವ ಸಮಯದಲ್ಲಿ ಕೋರ್ಟ್ ಎ.ಸಿ.ಬಿ ಮತ್ತು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು. ಈ ಸಮಯದಲ್ಲಿ ನಾನು ಅದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೋರ್ಟ್ ನಲ್ಲಿ ಹಾಜರಿದ್ದೆ. ಮಾಧ್ಯಮದವರು ಈ ಬಗ್ಗೆ ವಿಚಾರಿಸಿದಾಗ, ಅಲ್ಲಿ ನಡೆದ ಘಟನೆಯನ್ನು ಅವರಿಗೆ ವಿವರಿಸಿದೆ. ಕೋರ್ಟ್ ವ್ಯಕ್ತಪಡಿಸಿದ ಅಭಿಪ್ರಾಯ ಹಾಗೂ ಸರ್ಕಾರಿ ಮತ್ತು ಎ.ಸಿ.ಬಿ ವಕೀಲರಿಗೆ ಕೇಳಿದ ಪ್ರಶ್ನೆಗಳು ಕರ್ನಾಟಕದ ಸಾಮಾನ್ಯ ಜನರ ಅಭಿಪ್ರಾಯ ಹಾಗೂ ಪ್ರಶ್ನೆಗಳು ಕೂಡ. ಎ.ಸಿ.ಬಿ ಯ ರಚನೆ ಮತ್ತು ಅದು ಮಾಡಬೇಕಾಗಿರುವ ಕೆಲಸ ಈಗ ಅದು ಮಾಡುತ್ತಿರುವ ಕೆಲಸಕ್ಕೂ ಅಜಗಜಾಂತರ ವ್ಯತ್ಯಾಸ ಇದೆ. ಕೋರ್ಟ್ ಹೇಳಿದಂತೆ ಈ ಸಂಸ್ಥೆ ಒಂದು 'ಕಲೆಕ್ಷನ್ ಸೆಂಟರ್' ಆಗಿದೆ. ಸಣ್ಣ ಪುಟ್ಟ ಅಧಿಕಾರಿಗಳನ್ನು ಬಲಿ ಹಾಕಿ ದೊಡ್ಡ ದೊಡ್ಡ ಅಧಿಕಾರಿಗಳಿಗೆ ಮಣೆ ಹಾಕುವ ಕೆಲಸ ನಡೆಯುತ್ತಿದೆ. ಎಷ್ಟು ಜನ ಮೇಲಾಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿದೆ ಮತ್ತು ಅದರಲ್ಲಿ ಎಷ್ಟು ಪ್ರಕರಣಗಳಲ್ಲಿ 'ಬಿ ರಿಪೋರ್ಟ್' ಮಾಡಲಾಗಿದೆ ಎನ್ನುವ ವಿವರವನ್ನು ಕೋರ್ಟ್ ಕೇಳಿದೆ. ಸರ್ಕಾರ ಹಾಗೂ ಎ.ಸಿ.ಬಿ ಈಗಲಾದರೂ ಎಚ್ಚೆತ್ತುಕೊಂಡು ಸಂಸ್ಥೆಯ ಮೂಲ ಉದ್ದೇಶವಾದ ಭ್ರಷ್ಟಾಚಾರ ನಿರ್ಮೂಲನೆ ಮಾಡುವತ್ತ ಕೆಲಸ ಮಾಡಬೇಕಿದೆ. #Corruption #ACB #AntiCorruptionBureau #Karnataka #Kodagu #Coorg #Madikeri #Virajpet #Kushalnagar #Gonikoppal
News reports on the All-India Football tournament in Gonikoppal, 27/06/2022
ಗೋಣಿಕೊಪ್ಪಲುವಿನಲ್ಲಿ ಕೆಲದಿನಗಳ ಹಿಂದೆ ನಾನು ಉದ್ಘಾಟಿಸಿದ ಆಲ್ ಇಂಡಿಯಾ 7s ಫುಟ್ಬಾಲ್ ಪಂದ್ಯಾವಳಿಯ ಬಗ್ಗೆ ಹಲವಾರು ಪತ್ರಿಕೆಗಳಲ್ಲಿ ವರದಿಯಾಗಿದೆ.
ಯುವಜನತೆ ಕೆಟ್ಟ ಅಭ್ಯಾಸಗಳಿಂದ ದೂರವಿರಲು ಮತ್ತು ಕೆಟ್ಟ ವ್ಯಾಸನಗಳಿಂದ ಮುಕ್ತಿ ಪಡೆಯಲು ಕ್ರೀಡಾಕೂಟಗಳ ಮಹತ್ವದ ಬಗ್ಗೆ ನಾನು ಹೇಳಿದ ಮಾತುಗಳು ಮಾಧ್ಯಮದ ಮಿತ್ರರು ವರದಿ ಮಾಡಿದ್ದಾರೆ. ಯುವಜನರನ್ನು ಸರಿಯಾದ ದಾರಿಯಲ್ಲಿ ನಡೆಸಲು ಮತ್ತು ಎಲ್ಲಾ ಜನಾಂಗದ ಜನರನ್ನು ಒಟ್ಟುಗೂಡಿಸುವ ಶಕ್ತಿ ಕ್ರೀಡೆಗೆ ಮಾತ್ರ ಇದೆ ಎನ್ನುವ ಮಾತನ್ನು ಇಲ್ಲಿ ಮತ್ತೊಮ್ಮೆ ಹೇಳುತ್ತೇನೆ.
ಜಿಲ್ಲಾ ಪಂಚಾಯತ್ ಕೊಡಗು ನೆಹರು ಯುವ ಕೆಂದ್ರ, ಕ್ರೀಡಾ ಸಚಿವಾಲಯ ಹಾಗೂ ಆಲ್ ಸ್ಟಾರ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಈ ಪಂದ್ಯಾವಳಿಗಳು ಯಶಸ್ವಿಯಾಗಿ ಆಯೋಜನೆಯಾಗಿದಕ್ಕೆ ಮತ್ತೊಮ್ಮೆ ನನ್ನ ಅಭಿನಂದನೆಗಳು.
#Kodagu #Coorg #Madikeri #Virajpet #Kushalnagar #Gonikoppal

All-India Football tournament in Gonikoppal, 23/06/2022
ಗೋಣಿಕೊಪ್ಪಲುವಿನಲ್ಲಿ ಆಲ್ ಸ್ಟಾರ್ಸ್ ಫುಟ್ಬಾಲ್ ಕ್ಲಬ್ ವತಿಯಿಂದ ಆಯೋಜಿಸಲಾಗಿದ್ದ ಆಲ್ ಇಂಡಿಯಾ 7s ಫುಟ್ಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಪಾಲ್ಗೊಂಡ ಕ್ರೀಡಾಪಟುಗಳಿಗೂ, ಆಯೋಜಕರಿಗೂ ಶುಭಕೋರಿದೆ.
ರಾಷ್ಟ್ರಮಟ್ಟದ ಮತ್ತು ಅಂತರಾಷ್ಟೀಯ ಕ್ರೀಡಾಪಟುಗಳು ಸತತವಾಗಿ ಕೊಡುಗೆ ಕೊಟ್ಟಿರುವ ಕೊಡಗು ಜಿಲ್ಲೆಗೆ ಇದು ಸಾಧ್ಯವಾಗಿರುವುದು ಈ ರೀತಿಯ ಒಳ್ಳೆಯ ಪಂದ್ಯಾವಳಿಗಳ ಆಯೋಜನೆಯಿಂದ.
ಅಚ್ಚುಕಟ್ಟಾಗಿ ಪಂದ್ಯಾವಳಿಯನ್ನು ಆಯೋಜಿಸಿದ ಕ್ಲಬ್'ನ ಆಡಳಿತ ವರ್ಗಕ್ಕೂ, ಪಂದ್ಯಾವಳಿಯಲ್ಲಿ ಕ್ರೀಡಾಮನೋಭಾವದಿಂದ ಪಾಲ್ಗೊಂಡ ಕ್ರೀಡಾಪಟುಗಳಿಗೂ, ನನನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದ ಆಯೋಜಕರಿಗೂ ನನ್ನ ಧನ್ಯವಾದಗಳು.
#Kodagu #Coorg #Madikeri #Virajpet #Kushalnagar #Gonikoppal

Visit to Karekad Colony and interaction with locals, 22/06/2022
ಅರ್ವತೋಕ್ಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರೆಕಾಡ್ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಸ್ಥಳೀಯರ ಜೊತೆ ಅವರ ಸಮಸ್ಯೆಗಳನ್ನು ಆಲಿಸಿ ಅವನ್ನು ಬಗೆಹರಿಸುವ ಬಗ್ಗೆ ಚರ್ಚೆ ನಡೆಸಿದೆ.
ಕೊಡಗಿನ ಹಲವಾರು ಗ್ರಾಮಗಳ ರೀತಿಯಲ್ಲಿ ಕರೆಕಾಡ್ ಕೂಡ ಆಡಳಿತ ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.
ಸ್ಥಳೀಯರ ಜೊತೆ ಸಂವಾದದಲ್ಲಿ ಅಲ್ಲಿನ ಬಹುತೇಕ ಸಮಸ್ಯೆಗಳಿಗೆ ಆಡಳಿತ ವ್ಯವಸ್ಥೆ ಕಾರ್ಯೋನ್ಮುಖವಾದರೆ ಪರಿಹಾರ ಪಡೆಯಬಹುದೆಂಬುದು ಮನವರಿಕೆಯಾಗಿದೆ. ನನ್ನ ಕಡೆಯಿಂದ ಮಾಡಬಹುದಾದ ಎಲ್ಲಾ ಸಹಾಯವನ್ನು ಮಾಡುವುದಾಗಿ ಸ್ಥಳೀಯರಿಗೆ ಭರವಸೆ ನೀಡಿದ್ದೇನೆ.
#Kodagu #Coorg #Madikeri #Virajpet #Kushalnagar #Karekad #Arvathoklu
