Inauguration of sports tournament organised by Vokkaliga Yuva Vedike, 19/04/2022
ದಕ್ಷಿಣ ಕೊಡಗಿನ ಒಕ್ಕಲಿಗರ ಯುವ ವೇದಿಕೆ ಆಯೋಜಿಸಿದ್ದ ಸುಗ್ಗಿ-2022 ಕಾರ್ಯಕ್ರಮದ ಭಾಗವಾಗಿ ಕ್ರೀಡಾ ಪಂದ್ಯವಳಿಯನ್ನು ಉದ್ಘಾಟಿಸುವ ಅವಕಾಶ ಮಾಡಿಕೊಟ್ಟ ವೇದಿಕೆಯ ಅಧ್ಯಕ್ಷರಾದ ವಿ.ಪಿ.ಲೋಹಿತ್ ಗೌಡ ಮತ್ತು ಪದಾಧಿಕಾರಿಗಳಿಗೆ ಧನ್ಯವಾದಗಳು.
ಈಗಿನ ಸಂಧರ್ಭದಲ್ಲಿ ಜನರ ಮನಸ್ಸನ್ನು ಬೆಸೆಯುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರ. ಕ್ರೀಡಾಕೂಟಗಳನ್ನು ಆಯೋಜಿಸುವ ಮೂಲಕ ಈ ಕೆಲಸಕ್ಕೆ ತೊಡಗಿರುವ ವೇದಿಕೆ, ಅದರ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದೆ.
#Kodagu #Coorg #Ponnampet #Virajpet #Madikeri #Kushalnagar
Kodava family cricket tournament in T Shettigeri, 17/04/2022
ಟಿ ಶೆಟ್ಟಿಗೇರಿಯಲ್ಲಿ ಕೊಡವ ಕುಟುಂಬಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟನೆ ಮಾಡುವ ಅವಕಾಶ ಒದಗಿಬಂತು. ಕೊಡಗಿನ ವಿಶಿಷ್ಟ ಪರಂಪರೆಗಳಲ್ಲಿ ಕುಟುಂಬಗಳ ಕ್ರೀಡಾ ಪಂದ್ಯಾವಳಿಗಳು ಕೂಡ ಒಂದು. ಕ್ರೀಡಾ ಮನೋಭಾವ ಮತ್ತು ಒಗ್ಗಟ್ಟು ಬೆಳಸುವುದರಲ್ಲಿ ಈ ಕ್ರೀಡಾಕೂಟಗಳು ಸಹಕಾರಿ. ಅಂತಾರಾಷ್ಟ್ರೀಯ ಕ್ರೀಡಾಪಟುಗಳಿಗೆ ಹೆಸರುವಾಸಿಯಾದ ನಮ್ಮ ಜಿಲ್ಲೆಯಲ್ಲಿ ಕ್ರೀಡೆಗಳ ಜನಪ್ರಿಯತೆಗೆ ಕೂಡ ಈ ಕುಟುಂಬ ಕ್ರೀಡಾಕೂಟಗಳ ಕೊಡುಗೆ ದೊಡ್ಡದು.
ಈ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ ಮತ್ತು ಪಂದ್ಯಾವಳಿಗಳನ್ನು ಅಚ್ಚುಕಟ್ಟಾಗಿ ನಡೆಸಿದ ಆಯೋಜಕರಿಗೆ, ಕ್ರೀಡಾಪಟುಗಳಿಗೆ ಮತ್ತು ಟಿ ಶೆಟ್ಟಿಗೇರಿಯ ಸ್ಥಳೀಯರಿಗೆ ಅಭಿನಂದನೆಗಳು ಮತ್ತು ವಂದನೆಗಳು.
#Kodagu #Coorg #Madikeri #Virajpet #Ponnampet #TShettigeri
Vishu wishes, 15/04/2022

Good Friday, 15/04/2022

Demand for KS Eshwarappa's arrest, 15/04/2022
ಬಿಜೆಪಿ ನಾಯಕ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಮೇಲೆ ಲಂಚ ಆರೋಪ ಮಾಡಿ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಸಂತೋಷ್ ಪ್ರಕರಣದಲ್ಲಿ ಈಶ್ವರಪ್ಪ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟರೆ ಸಾಲದು. ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಿ ತನಿಖೆ ಆರಂಭಿಸಬೇಕು. ಇದೊಂದು ಸಾಧಾರಣ ವಿಚಾರವಲ್ಲ. ಜನತೆಗೆ ಸರ್ಕಾರ ಹಾಗೂ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಬುಡಮೇಲು ಮಾಡುವ ಪರಿಸ್ಥಿತಿ ಇದೆ. ಸರ್ಕಾರ ನಡೆಸುವವರೆ ಈ ಪರಿಯ ಭ್ರಷ್ಟಾಚಾರದಲ್ಲಿ ತೊಡಗಿರುವುದು ರಾಜ್ಯವೇ ತಲೆ ತಗ್ಗಿಸುವಂತಹ ವಿಚಾರ.
#KSEshwarappa #Contractors #40% #Corruption