Spent some valuable time with the children of Madikeri Taluk Madhe Grama Panchayat area, giving information about education and learning methods., 26/05/2026

ಮಡಿಕೇರಿ ತಾಲೂಕು ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರಕಾರಿ ಶಾಲೆ ಮಕ್ಕಳೊಂದಿಗೆ ಕೆಲವು ಅಮೂಲ್ಯ ಸಮಯವನ್ನು ಕಳೆದು, ಮಕ್ಕಳೊಂದಿಗೆ ವಿದ್ಯಾಭ್ಯಾಸ ಹಾಗೂ ಕಲಿಕೆಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದ ಸಂದರ್ಭ.

 


P.N. of Somavarpet. At Heritage Homestay, The Mysore Coffee Processing, Sales and Terrorist Cooperative Association meeting chaired by me. In the wake of the association restored, the decision was taken to conduct a complex on determining the association’, 26/05/2026

ಸೋಮವಾರಪೇಟೆಯ ಪಿ.ಎನ್.ಹೆರಿಟೇಜ್ ಹೋಮ್ ಸ್ಟೇ ಯಲ್ಲಿ, ದಿ ಮೈಸೂರು ಕಾಫಿ ಸಂಸ್ಕರಣ, ಮಾರಾಟ ಮತ್ತು ಉಗ್ರಾಣ ಸಹಕಾರ ಸಂಘದ ಸಭೆಯು ನನ್ನ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘವು ಪುನಃಶ್ಚತನಗೊಂಡಿರುವ ಹಿನ್ನೆಲೆಯಲ್ಲಿ, ಮುಂದಿನ ದಿನಗಳಲ್ಲಿ ಕಾಫಿ ಮತ್ತು ಇತರೆ ಪ್ಲಾಂಟೇಷನ್ ಬೆಳೆ ಉತ್ಪನ್ನಗಳ ಮೌಲ್ಯವೃದ್ದೀಕರಣದಲ್ಲಿ ಸಂಘದ ಪಾತ್ರ ಮತ್ತು ಚಟುವಟಿಕೆಗಳನ್ನು ನಿರ್ಧರಿಸುವ ಕುರಿತು ವಿಚಾರ ಸಂಕೀರ್ಣ ನಡೆಸುವ ಬಗ್ಗೆ ತೀರ್ಮಾನ ಕೈಗೊಂಡು, ಮುಂದಿನ ದಿನಗಳಲ್ಲಿ ಸಂಘವು ಮತ್ತಷ್ಟು ಲಾಭ ಹಾಗೂ ಯಶಸ್ಸಿನೊಂದಿಗೆ ಮುಂದುವರೆಯಲು ಕಾರ್ಯತಂತ್ರ ಹಾಗೂ ಯೋಜನೆಗಳನ್ನು ರೂಪಿಸುವ ಕುರಿತು ಚರ್ಚಿಸಲಾಯಿತು.
 

During visiting the house of Madikeri Taluk Sampaje Zone Congress President Vijay Kumar in Virajpet assembly constituency., 26/05/2026

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಸಂಪಾಜೆ ವಲಯ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ ಕುಮಾರ್ ರವರ ಮನೆಗೆ ಭೇಟಿ ನೀಡಿದ ಸಂದರ್ಭ.

 


Water facility was provided to the people of Betoli village through a personally arranged free water supply tanker to alleviate water shortage of people of Virajpet assembly constituency., 25/05/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಜನತೆಯ ನೀರಿನ ಅಭಾವವನ್ನು ನೀಗಿಸಲು ವೈಯುಕ್ತಿಕವಾಗಿ ವ್ಯವಸ್ಥೆ ಮಾಡಿದ ಉಚಿತ ನೀರು ಸರಬರಾಜು ಟ್ಯಾಂಕರ್ ಮುಖಾಂತರ, ಬೇಟೋಳಿ ಗ್ರಾಮದ ಜನರಿಗೆ ನೀರು ಸೌಲಭ್ಯ ಕಲ್ಪಿಸಿಕೊಡಲಾಯಿತು.

 


The inauguration of the new gym center owned by Poovanna and Ismail in Napoklu area of Madikeri taluk and congratulated them., 25/05/2026

ಮಡಿಕೇರಿ ತಾಲೂಕು ನಾಪೋಕ್ಲು ಭಾಗದಲ್ಲಿ ಪೂವಣ್ಣ ಹಾಗೂ ಇಸ್ಮಾಯಿಲ್ ರವರ ಮಾಲೀಕತ್ವದ ನೂತನ ಜಿಮ್ ಸೆಂಟರ್ ನ್ನು ಉದ್ಘಾಟನೆ ನೇರೆವೆರಿಸಿ ಶುಭ ಹಾರೈಸಲಾಯಿತು.