District In-charge Minister N S Bhosaraju, President of State Guarantee Implementation Committee, H M Revanna, participated in the Guarantee Worker and Guarantee Utsav programme in the Karnataka State Solid Government's ambitious and very successful five , 23/11/2025

ಕರ್ನಾಟಕ ರಾಜ್ಯ ಘನ ಸರಕಾರದ ಮಹತ್ವಾಕಾಂಕ್ಷೆಯ ಹಾಗೂ ಅತ್ಯಂತ ಯಶಸ್ಸಿನ ಪಂಚ ಗ್ಯಾರಂಟಿ ಯೋಜನೆಯ ಲಾಭ ಹಾಗೂ ಪ್ರಯೋಜನವನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ, ಗ್ಯಾರಂಟಿ ಕಾರ್ಯಗಾರ ಹಾಗೂ ಗ್ಯಾರಂಟಿ ಉತ್ಸವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಎಸ್ ಭೋಸರಾಜು, ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಎಚ್ ಎಂ ರೇವಣ್ಣ ರವರೊಂದಿಗೆ ಭಾಗವಹಿಸಲಾಯಿತು.


The inauguration of the women cricket tournament organized by "Niliath Ladies Club, Kokeri" of Virajpet assembly constituency, Virajpet Taluk Cheyandane, "Niliath Ladies Club, Kokeri"., 23/11/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವಿರಾಜಪೇಟೆ ತಾಲೂಕು ಚೆಯ್ಯಂಡಾಣೆಯ, "ನೀಲಿಯತ್ ಲೇಡೀಸ್ ಕ್ಲಬ್, ಕೊಕೇರಿ" ಇವರು ಆಯೋಜಿಸಿದ ಮಹಿಳಾ ಕ್ರಿಕೆಟ್ ಪಂದ್ಯಾಟದ ಉದ್ಘಾಟನೆ ನೆರವೇರಿಸಿ ಶುಭ ಕೋರಲಾಯಿತು.


Kodagu District Kannada Sahitya Parishad's preliminary meeting along with Honorable District Incharge Minister Mr. N.S. Bhosaraju., 22/11/2025

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಭಾವಿ ಸಭೆಯಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಭೋಸರಾಜು ರವರೊಂದಿಗೆ ಭಾಗವಹಿಸಲಾಯಿತು.


District level quarterly progress inspection meeting was held today at Madikeri Kodagu district panchayat hall. District Incharge Minister Mr. N.S. in the meeting Bhosaraju and MLA Dr. Manthar Gowda, District Collector and Officers were present. Departmen, 21/11/2025

ಮಡಿಕೇರಿಯ ಕೊಡಗು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಜಿಲ್ಲಾ ಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್. ಭೋಸರಾಜು ಹಾಗೂ ಶಾಸಕರಾದ ಡಾ. ಮಂತರ್ ಗೌಡ, ಜಿಲ್ಲಾಧಿಕಾರಿಗಳು ಮತ್ತು ಅಧಿಕಾರಿಗಳು ಹಾಜರಿದ್ದರು. ಇಲಾಖಾವಾರು ವರದಿಗಳ ಪರಿಶೀಲನೆ ನಡೆಯಿತು.


Madikeri Taluk of Virajpet assembly constituency, participated in the inauguration program of newly constructed pavilion building and congratulated the Central Sports Board Rural Sports Meet, 21/11/2025

ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಮಡಿಕೇರಿ ತಾಲೂಕು, ಪಾರಾಣೆಯ ಕ್ರೀಡಾಂಗಣಕ್ಕೆ, ನೂತನವಾಗಿ ನಿರ್ಮಾಣಗೊಂಡ ಪೆವಿಲಿಯನ್ ಕಟ್ಟಡದ ಉದ್ಘಾಟನೆ ಕಾರ್ಯಕ್ರಮ ಹಾಗೂ ಕೇಂದ್ರ ಕ್ರೀಡಾ ಮಂಡಳಿಯ ಗ್ರಾಮಾಂತರ ಕ್ರೀಡಾಕೂಟದಲ್ಲಿ ಭಾಗವಹಿಸಿ ಶುಭ ಹಾರೈಸಿದೆ.