Participated in the cleanliness drive organized by Virajpet Municipal Office at Malethirike hills of Virajpet taluk, 23/12/2024
ವಿರಾಜಪೇಟೆ ತಾಲೂಕು ಮಲೆತಿರಿಕೆ ಬೆಟ್ಟದಲ್ಲಿ ವಿರಾಜಪೇಟೆ ಪುರಸಭೆ ಕಾರ್ಯಾಲಯ ವತಿಯಿಂದ ಆಯೋಜನೆಗೊಂಡ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಲಾಯಿತು.

Happy National Farmers Day to all the farmer friends, 23/12/2024
ನಾಡಿನ ಸಮಸ್ತ ರೈತ ಬಾಂಧವರಿಗೆ ರಾಷ್ಟ್ರೀಯ ರೈತರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

Participation and Best Wishes at the Puthari Cup Kembatti Sports Festival Organized by Shri Pannangalattemme Youth Association, Maggula, 23/12/2024
ಶ್ರೀ ಪನ್ನಂಗಾಲತಮ್ಮೆ ಯುವಕ ಸಂಘ ಮಗ್ಗುಲ, ಇವರ ಆಶ್ರಯದಲ್ಲಿ ಆಯೋಜಿಸಿದ ಪುತ್ತರಿ ಕಪ್ ಕೆಂಬಟ್ಟಿ ಕ್ರೀಡೋತ್ಸವದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.

An Enlightening Experience at the Centenary Commemorative Lecture by Justice Venkataramiah, 22/12/2024
ಇಂದು ನ್ಯಾಯಮೂರ್ತಿ ವೆಂಕಟರಾಮಯ್ಯ ಶತಮಾನೋತ್ಸವದ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಕಾನೂನು ವಿದ್ಯಾರ್ಥಿಯಾದ ನನಗೆ ಅತ್ಯದ್ಭುತವಾದ ಉಪನ್ಯಾಸ ಕೇಳಿ ಪ್ರಜ್ಞಾಶಾಲಿಯಾಗಲು ಅವಕಾಶವಾಯಿತು.
ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಶ್ರೀಮತಿ ಬಿ.ವಿ. ನಾಗರತ್ನ ಅವರು,ಶ್ರೀ ಪಿ.ಎಸ್ ನರಸಿಂಹ ಅವರು, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು, ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು ಕಾನೂನು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

The moment I attended a preliminary meeting led by Hon. CM Siddaramaiah on the occasion of the historic centenary celebrations of the Congress Party to be held in Belgaum on Dec 26th and 27th, 22/12/2024
ಇದೆ ಡಿಸೆಂಬರ್ 26, 27ರಂದು ಬೆಳಗಾವಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಪಕ್ಷದ ಐತಿಹಾಸಿಕ ಶತಮಾನೋತ್ಸವ ಆಚರಣೆಯ ಪ್ರಯುಕ್ತ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ನೇತೃತ್ವದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ಕ್ಷಣ.
