Dignitaries Briefed on Development Works in Virajpet, 26/08/2026

ವಿರಾಜಪೇಟೆ ಕ್ಷೇತ್ರದಲ್ಲಿ ಕೈಗೊಂಡಿರುವ ಕೆಲಸಗಳನ್ನು ಜನಸಾಮಾನ್ಯರಿಗೆ ತಿಳಿಸುವ "ವಾಗ್ದಾನ-ಅನುಷ್ಠಾನ" ಪುಸ್ತಕವನ್ನು ಕುತೂಹಲದಿಂದ ವೀಕ್ಷಿಸುತ್ತಾ ಮೆಚ್ಚುಗೆ ವ್ಯಕ್ತಪಡಿಸಿದ, ಕರ್ನಾಟಕ ರಾಜ್ಯ ಘನ ಸರಕಾರದ ಮಾನ್ಯ ಉಪಮುಖ್ಯಮಂತ್ರಿ ಶ್ರೀ ಡಾ ಜಿ ಪರಮೇಶ್ವರ ಅವರು ಹಾಗೂ ಗೃಹ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು.

 


Public and Party Workers Congratulate MLA on New Appointment, 26/08/2026

ಪೊನ್ನಂಪೇಟೆಯ ಶಾಸಕರ ಅಧಿಕೃತ ಕಚೇರಿಯಲ್ಲಿ ಸಾರ್ವಜನಿಕರನ್ನು ಹಾಗೂ ಕಾರ್ಯಕರ್ತರನ್ನು ಭೇಟಿಯಾದ ಸಂದರ್ಭ, ನೂತನವಾಗಿ ನನಗೆ ದೊರಕಿರುವ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಸಾರ್ವಜನಿಕರು ನನ್ನನ್ನು ಅಭಿನಂದಿಸಿದರು.
ಹಾಗೂ ಸಾರ್ವಜನಿಕರಿಂದ ಹವಾಲುಗಳನ್ನು ಸ್ವೀಕರಿಸಿ ಸಂದರ್ಭ.
 

I cannot stay silent when my personal matters are dragged into politics., 26/08/2026

ರಾಜಕೀಯಕ್ಕೆ ನನ್ನ ವೈಯಕ್ತಿಕ ವಿಷಯವನ್ನು ಎಳೆದು ತಂದರೆ ಸುಮ್ಮನೆ ಇರಲು ಸಾಧ್ಯವಿಲ್ಲ.

 


Kodagu’s Udant Shines in National Shooting, 23/08/2026

ರಾಷ್ಟ್ರೀಯ ಶೂಟಿಂಗ್ ಪ್ರಯೋಗಿತದಲ್ಲಿ ಮೊದಲ ಸ್ಥಾನ ಗಳಿಸಿದ ಕೊಡಗಿನ ಮೊದಲ ಕ್ರೀಡಾಪಟು ಎಂಬ ಹೆಗ್ಗಳಿಕೆಯ ಬಿಟ್ಟಂಗಾಲ ಗ್ರಾಮದ ಪೊನ್ನಿರ ಮೋಹನ್ ದಂಪತಿಗಳ ಪುತ್ರ ಉದಾಂತ್ ರವರ ಸಾಧನೆಯನ್ನು ಗುರುತಿಸಿ ಆತ್ಮೀಯವಾಗಿ ಸನ್ಮಾನಿಸಿ ಕೊಡಗಿನಿಂದ ಇಂತಹ ಸಾಧನೆ ಮಾಡಿದ ಮೊದಲ ವ್ಯಕ್ತಿ ಎಂಬ ಕೀರ್ತಿಯನ್ನು ಸದಾ ಗಮನದಲ್ಲಿಟ್ಟುಕೊಂಡು, ಮುಂದಿನ ದಿನಗಳಲ್ಲಿ ಮತ್ತಷ್ಟು ಸಾಧನೆಯನ್ನು ಮಾಡಿ ನಾಡಿಗೆ ಕೀರ್ತಿ ತರುವಂತೆ ಆಗಲಿ ಎಂದು ಹಾರೈಸಿದೆ.

 


Special Prayer at Padi Shri Igguthappa Temple for Abundant Rainfall and Public Well-Being, 23/08/2026

ಕರ್ನಾಟಕ ರಾಜ್ಯ ಘನ ಸರಕಾರದ ಮಾನ್ಯ ಕೃಷಿ ಸಚಿವರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಪಿಎಂ ನರೇಂದ್ರ ಸ್ವಾಮಿ ರವರೊಂದಿಗೆ ಪಾಡಿ ಶ್ರೀ ಇಗುತ್ತಪ್ಪ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿ ನಾಡಿಗೆ ಉತ್ತಮ ಮಳೆಯನ್ನು ನೀಡಿ ಜನರು ಸುಖ ಶಾಂತಿಯಿಂದ ಇರುವಂತೆ ಆಶೀರ್ವದಿಸುವಂತೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಡಿಕೇರಿ ಶಾಸಕರಾದ ಮಂತರ್ ಗೌಡ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಹಾಗೂ ಪ್ರಮುಖರು ಉಪಸ್ಥಿತರಿದ್ದರು.