Visit to Arameri Aadi Pannagalathamme temple, 16/12/2022
Visit to Arameri Aadi Pannagalathamme temple. ಅರಮೇರಿ ಆದಿ ಪನ್ನಂಗಾಲತಮ್ಮೆ ಸನ್ನಿಧಾನಕ್ಕೆ ಭೇಟಿ
ಅರಮೇರಿಯಲ್ಲಿ ಶತಮಾನಗಳಷ್ಟು ಹಳೆಯದಾದ ಇತಿಹಾಸ ಪ್ರಸಿದ್ಧ ಶ್ರೀ ಆದಿ ಪನ್ನಂಗಾಲತಮ್ಮೆ ದೇವಾಲಯಕ್ಕೆ ಭೇಟಿ ಕೊಟ್ಟು ಪ್ರಾರ್ಥನೆ ಸಲ್ಲಿಸಿದೆ. ಇತ್ತೀಚೆಗೆ ಮರ ಬಿದ್ದ ಕಾರಣ, ದೇವಾಲಯದ ಪುನರ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಇದಕ್ಕೆ ನನ್ನ ಅಳಿಲು ಸೇವೆಯನ್ನು ಸಲ್ಲಿಸಿದೆ.
ಕೊಡಗಿನ ಮೂಲನಿವಾಸಿಗಳಾದ ಕೊಡಗು ಕೆಂಬಟ್ಟಿ ಸಮುದಾಯದ ಆರಾಧ್ಯ ದೇವತೆ ಶ್ರೀ ಆದಿ ಪನ್ನಂಗಾಲತಮ್ಮೆ. ಪನ್ನಂಗಾಲತಮ್ಮೆಯು ಕೊಡವರ ಅಧಿದೇವರಾದ ಇಗ್ಗುತಪ್ಪ ದೇವರ ತಂಗಿ ಎನ್ನುವುದು ಜನರ ನಂಬಿಕೆ.
ಅರಮೇರಿಗೂ ತನ್ನದೇ ಮಹತ್ವ ಇದೆ. ಪನ್ನಂಗಾಲತಮ್ಮೆ ದೇವಿಗೆ ಅರಮೇರಿ ಎರಡನೇ ನೆಲೆ ಎನ್ನುವುದು ಭಕ್ತರ ನಂಬಿಕೆ. ಈ ಪುಣ್ಯ ಕ್ಷೇತ್ರಕ್ಕೆ ಭೇಟಿಕೊಟ್ಟು ಧನ್ಯನಾದೆ. ತಾಯಿಯ ಆಶೀರ್ವಾದ ಎಲ್ಲರ ಮೇಲೂ ಇರಲಿ ಎಂದು ಪ್ರಾರ್ಥಿಸಿದೆ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda



District level Volleyball tournament, 14/12/2022
District level Volleyball tournament. ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿ
ಲಿಂಮ್ರ ಮತ್ತು ಅರಫ ಕ್ರೀಡಾ ಸಂಘದ ವತಿಯಿಂದ ಕಡಂಗ ಗ್ರಾಮದ ಯೋಧ ಹಾಗೂ ಕ್ರೀಡಾಪಟು ಬಲ್ಲಚಂಡ ಟಿಟೋ ಸ್ಮರಣಾರ್ಥ ಆಯೋಜಿಸಲಾಗಿದ್ದ ಜಿಲ್ಲಾಮಟ್ಟದ ವಾಲಿಬಾಲ್ ಪಂದ್ಯಾವಳಿಯ ಸಂಘಟಕರು ಮತ್ತು ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದೆ.
ಸ್ಥಳೀಯ ಯೋಧ ಹಾಗೂ ಕ್ರೀಡಾಪಟುವಿನ ಸ್ಮರಣೆಯನ್ನು ಪಂದ್ಯಾವಳಿಯ ಮೂಲಕ ಸ್ಥಳೀಯರೆ ಮಾಡುತ್ತಿರುವುದು ಹೆಮ್ಮೆಯ ವಿಷಯ. ಜಿಲ್ಲೆಯ ವಿವಿಧ ಭಾಗಗಳಿಂದ ಬಂದ ತಂಡಗಳು ಕ್ರೀಡಾಮನೋಭಾವದಿಂದ ಪಾಲ್ಗೊಂಡು ಪಂದ್ಯಾವಳಿಯನ್ನು ಯಶಸ್ವಿಗೊಳಿಸಿದ್ದು ಸಂತಸ ತಂದಿದೆ.
ಮುಂದಿನ ದಿನಗಳಲ್ಲಿ ಈ ಪಂದ್ಯಾವಳಿ ಇನ್ನಷ್ಟು ಉತ್ತುಂಗಕೆ ಏರಲಿ ಎಂದು ಹಾರೈಸಿದೆ. ಪಂದ್ಯಾವಳಿಯಲ್ಲಿ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ಮತ್ತು ನೆನಪಿನಲ್ಲಿ ಉಳಿಯುವಂತೆ ಇದನ್ನು ಆಯೋಜಿಸಿದ ಸಂಘಟಕರಿಗೂ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Kaveri #Talacauvery #Hudikeri #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #ಕೊಡಗು #ವಿರಾಜಪೇಟೆ #ಮಡಿಕೇರಿ #ಪೊನ್ನಂಪೇಟೆ #ಕುಶಾಲನಗರ

Welcoming new members to Party, 13/12/2022
Welcoming new members to Party. ಪಕ್ಷ ಸೇರ್ಪಡೆ ಕಾರ್ಯಕ್ರಮ
ಅರ್ವತೋಕ್ಲು ಗ್ರಾಮದ ಮನೆಯಪಂಡ ಬೋಪಣ್ಣ ಮತ್ತು ಮನೆಯಪಂಡ ಮುದಪ್ಪ ಅವರುಗಳನ್ನು ಕಾಂಗ್ರೆಸ್ ಪಕ್ಷಕ್ಕೆ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಪೊನ್ನಂಪೇಟೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ನಮ್ಮ ಪಕ್ಷದ ಸಿದ್ಧಾಂತವನ್ನು ಒಪ್ಪಿ ಅವರುಗಳು ಸ್ವಯಂಪ್ರೇರಣೆಯಿಂದ ಪಕ್ಷವನ್ನು ಸೇರಿದ್ದಾರೆ.
ಅವರಿಗೆ ಶುಭವನ್ನು ಕೋರಿ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗೆ ಶ್ರಮಿಸಲು ಅವರಿಗೆ ಪ್ರೇರೇಪಣೆ ನೀಡುವ ಮಾತುಗಳನ್ನು ಹೇಳಿದೆ. ಸರ್ವ ಜನರ ಹಿತವನ್ನು ಕಾಯುವ, ಎಲ್ಲಾ ಜನಾಂಗಗಳ ಒಳಿತಿಗೆ ಬದ್ಧವಾಗಿರುವ ನಮ್ಮ ಪಕ್ಷ ಹೊಸ ಸದಸ್ಯರನ್ನು ತನ್ನತ್ತ ಸೆಳೆಯುತ್ತಿದೆ. ಪಕ್ಷದ ಕಾರ್ಯಕರ್ತರಿಗೆ, ಬೆಂಬಲಿಗರಿಗೆ ಜನಹಿತಕ್ಕೆ ದುಡಿಯುವ ಮಾರ್ಗದರ್ಶನ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಪಕ್ಷವನ್ನು ಇನ್ನಷ್ಟು ಸದೃಢಗೊಳಿಸಲು ಎಲ್ಲರೂ ಒಟ್ಟಾಗಿ ಶ್ರಮಿಸೋಣ.
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #ಕೊಡಗು #ವಿರಾಜಪೇಟೆ #ಮಡಿಕೇರಿ #ಪೊನ್ನಂಪೇಟೆ #ಕುಶಾಲನಗರ

Supporting the cause of Kunda residents, 12/12/2022
Supporting the cause of Kunda residents. ಕುಂಡ ಗ್ರಾಮದ ಜನರಿಗೆ ಸಹಕಾರ
ಕುಂಡ ಗ್ರಾಮದ ನಿವಾಸಿಗಳು ತಮ್ಮ ಸ್ವಂತ ಶ್ರಮದಿಂದ ಅಲ್ಲಿನ ಆಟದ ಮೈದಾನವನ್ನು ನವೀಕರಣ ಮಾಡಲು ಕೈಹಾಕಿದ್ದಾರೆ. ಅವರ ಈ ಸ್ವಯಂಸೇವೆಗೆ ನನ್ನ ಬೆಂಬಲ ಮತ್ತು ಸಹಕಾರ ಸೂಚಿಸಿದೆ.
ಮೈದಾನದ ನವೀಕರಣಕ್ಕೆ ಗುದ್ದಲಿ ಪೂಜೆ ಸಮಾರಂಭದಲ್ಲಿ ಪಾಲ್ಗೊಂಡು ಗ್ರಾಮದ ನಿವಾಸಿಗಳಿಗೆ ಶುಭಕೋರಿದೆ. ಮೂಲಸೌಕರ್ಯಗಳನ್ನು ನಾವು ಆಡಳಿತದಿಂದ ನೀರೀಕ್ಷೆ ಮಾಡುವುದು ಸಹಜ. ಅದು ವಿಫಲವಾದಾಗ ಅನಿವಾರ್ಯವಾಗಿ ಜನ ಇವುಗಳನ್ನು ತಾವೇ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಒದಗುತ್ತದೆ.
ಒಂದು ಮಾದರಿ ಕೆಲಸಕ್ಕೆ ಮುಂದಾಗಿರುವ ಕುಂಡ ಗ್ರಾಮದ ಜನತೆ ಅಭಿನಂದನಾರ್ಹರು. ಈ ಕಾರ್ಯ ಶೀಘ್ರ ಪೂರ್ಣಗೊಂಡು ಸ್ಥಳೀಯ ಕ್ರೀಡಾಪಟುಗಳು, ಮಕ್ಕಳು ಹಾಗೂ ಸಾರ್ವಜನಿಕರು ಉಪಯೋಗ ಪಡೆಯುವಂತಾಗಲಿ ಎಂದು ಹಾರೈಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri #Kunda #ಕೊಡಗು #ವಿರಾಜಪೇಟೆ #ಮಡಿಕೇರಿ #ಪೊನ್ನಂಪೇಟೆ #ಕುಶಾಲನಗರ

Families Sports Meet at Amangeri., 10/12/2022
Families Sports Meet at Amangeri.
ಅಮ್ಮಂಗೇರಿಯಲ್ಲಿ ಕೌಟುಂಬಿಕ ಕ್ರೀಡಾಕೂಟ
ಅಮ್ಮಂಗೇರಿಯಲ್ಲಿ ಜರುಗಿದ ಕೌಟುಂಬಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಂದರ್ಭ. ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ ಕೊಡಗಿನ ಪರಂಪರೆಯನ್ನು ಕಾಪಾಡುವ ಈ ರೀತಿಯ ಕ್ರೀಡಾಕೂಟಗಳ ಮಹತ್ವದ ಬಗ್ಗೆ ಮಾತನಾಡಿದೆ.
ಕೊಡಗಿನಲ್ಲಿ ಕ್ರೀಡೆ ವೃತ್ತಿಪರ ಆಟಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆ ಇಲ್ಲಿನ ಎಲ್ಲಾ ಜನರ ಬದುಕಿನ, ಸಂಸ್ಕೃತಿಯ ಬಾಗವಾಗಿದೆ. ಇದನ್ನು ಬೆಳಸಿ, ಪೋಷಿಸುವ ಜವಾಬ್ದಾರಿ ಹೊತ್ತಿರುವ ಈ ರೀತಿಯ ಸಂಘಟನೆಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ.
ಕ್ರೀಡಾಕೂಟವನ್ನು ಆಯೋಜಿಸಿ ಅದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ಪದಾಧಿಕಾರಿಗಳಿಗೆ ನನ್ನ ಶುಭಾಶಯಗಳು. ಇದನ್ನು ಯಸಶ್ವಿಗೊಳಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri
ಅಮ್ಮಂಗೇರಿಯಲ್ಲಿ ಕೌಟುಂಬಿಕ ಕ್ರೀಡಾಕೂಟ
ಅಮ್ಮಂಗೇರಿಯಲ್ಲಿ ಜರುಗಿದ ಕೌಟುಂಬಿಕ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಸಂದರ್ಭ. ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಈ ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿ ಕೊಡಗಿನ ಪರಂಪರೆಯನ್ನು ಕಾಪಾಡುವ ಈ ರೀತಿಯ ಕ್ರೀಡಾಕೂಟಗಳ ಮಹತ್ವದ ಬಗ್ಗೆ ಮಾತನಾಡಿದೆ.
ಕೊಡಗಿನಲ್ಲಿ ಕ್ರೀಡೆ ವೃತ್ತಿಪರ ಆಟಗಾರರಿಗೆ ಮಾತ್ರ ಸೀಮಿತವಾಗಿಲ್ಲ. ಕ್ರೀಡೆ ಇಲ್ಲಿನ ಎಲ್ಲಾ ಜನರ ಬದುಕಿನ, ಸಂಸ್ಕೃತಿಯ ಬಾಗವಾಗಿದೆ. ಇದನ್ನು ಬೆಳಸಿ, ಪೋಷಿಸುವ ಜವಾಬ್ದಾರಿ ಹೊತ್ತಿರುವ ಈ ರೀತಿಯ ಸಂಘಟನೆಗಳು ಬಹಳ ಮುಖ್ಯ ಪಾತ್ರವನ್ನು ವಹಿಸುತ್ತಿವೆ.
ಕ್ರೀಡಾಕೂಟವನ್ನು ಆಯೋಜಿಸಿ ಅದನ್ನು ಬಹಳ ಅಚ್ಚುಕಟ್ಟಾಗಿ ನಿರ್ವಹಿಸಿದ ಶ್ರೀ ಪಾಡಿ ಸುಬ್ರಹ್ಮಣ್ಯ ಯುವಕರ ಸಂಘದ ಪದಾಧಿಕಾರಿಗಳಿಗೆ ನನ್ನ ಶುಭಾಶಯಗಳು. ಇದನ್ನು ಯಸಶ್ವಿಗೊಳಿಸಿದ ಎಲ್ಲರಿಗೂ ನನ್ನ ಅಭಿನಂದನೆಗಳು.
#Kodagu #Madikeri #Virajpet #Ponnampet #Coorg #Thithimathi #PuthariFestival #Somwarpet #Murnad #MBadaga #Parane #Kaveri #Talacauvery #Hudikeri #Mayamudi #Begur #Chiniwada #Gonikoppa #Shivakeri #Talakaveri #Chennayyanakote #Pollibetta #Devapura #Amangeri
