Inauguration of Kallubane Cricket tournament finals at Arji Panchayat , 17/05/2022

ಕಲ್ಲುಬಾಣಿ ಯೂಥ್ ಅಸೋಸಿಯೇಷನ್ ಅವರು ಆಯೋಜಿಸಿದ್ದ ಕಲ್ಲುಬಾಣಿ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯ ಫೈನಲ್ಸ್ ಪಂದ್ಯವನ್ನು ಉದ್ಘಾಟಿಸಿ ಪಂದ್ಯವನ್ನು ವೀಕ್ಷಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡುವ ಅವಕಾಶ ಒದಗಿ ಬಂತು.

ಮೂರು ದಿನಗಳ ಪಂದ್ಯಾವಳಿಗಳು ಅಚ್ಚುಕಟ್ಟಾಗಿ ಆಯೋಜಿಸಿದ್ದ ಆಯೋಜಕರಿಗೂ, ಕ್ರೀಡಾ ಮನೋಭಾವದಿಂದ ಪಂದ್ಯಗಳಲ್ಲಿ ಪಾಲ್ಗೊಂಡ ಕ್ರೀಡಾಪಟುಗಳಿಗೂ ಅಭಿನಂದನೆಗಳು.

ಕ್ರೀಡಾ ಕೌಶಲ್ಯ ಮಾತ್ರವಲ್ಲದೆ, ಸ್ನೇಹ ಮನೋಭಾವ ಮತ್ತು ಒಟ್ಟಾಗಿ ಪ್ರಗತಿ ಸಾಧಿಸುವುದನ್ನು ಕ್ರೀಡೆ ನಮಗೆ ಕಲಿಸುತ್ತದೆ. ಕಾರ್ಯಕ್ರಮಕ್ಕೆ ನನಗೆ ಆಹ್ವಾನ ಕೊಟ್ಟ ಆಯೋಜಕರಿಗೆ ಮತ್ತೊಮ್ಮೆ ಧನ್ಯವಾದಗಳು.

#Kodagu #Coorg #Virajpet #Ponnampet #Madikeri #Kushalnagar #Cricket #Sports #Kallubane

 
 

Visit to Ponnampet Jodubetti temple , 16/05/2022

ಪೊನ್ನಂಪೇಟೆಯ ಜೋಡುಬೀಟಿ ದೇವಸ್ಥಾನಕ್ಕೆ ಭೇಟಿಕೊಟ್ಟ ಪೂಜೆ ಸಲ್ಲಿಸಿ, ದೇವಸ್ಥಾನದ ಪುನಶ್ಚೇತನಕ್ಕೆ   ಮಾಡಬೇಕಾದ ಕಾರ್ಯಗಳ ಬಗ್ಗೆ ಸ್ಥಳೀಯ ಮುಖಂಡರು, ದೇವಸ್ಥಾನದ ಭಕ್ತಾದಿಗಳು ಹಾಗೂ ಪೋಷಕರೊಂದಿಗೆ ಸಮಾಲೋಚನೆ ಮಾಡಲಾಯಿತು.

ದೇವಸ್ಥಾನದ ಈಗಿನ ಪರಿಸ್ಥಿತಿ ಸಾಕಷ್ಟು ಸುಧಾರಣೆ ಆಗಬೇಕಿರುವುದು ಸ್ಪಷ್ಟ. ಅದಕ್ಕೆ ಬೇಕಾದ ಎಲ್ಲಾ ರೀತಿಯ ಬೆಂಬಲವನ್ನು ಕ್ರೂಡಿಕರಿಸಿ ದೇವಸ್ಥಾನದ ನಿರ್ಮಾಣ ಆಗಬೇಕು ಎಂಬ ನಿಲುವು ಎಲ್ಲರದು.

#Kodagu #Coorg #Virajpet #Ponnampet #Kushalnagar #Madikeri

 
 

Visit to Virajpet electrocution victim's home, 16/05/2022

ವಿರಾಜಪೇಟೆಯ ಗಾಂಧಿನಗರದಲ್ಲಿ ಸಂಭವಿಸಿದ ವಿದ್ಯುತ್ ಸ್ಪರ್ಶ ದುರ್ಘಟನೆಯಲ್ಲಿ ಸಾವಿಗೀಡಾದ ಆಟೋ ಚಾಲಕ ದಿವಾಕರ್ ಅವರ ಮನೆಗೆ ಭೇಟಿಕೊಟ್ಟು ಅವರ ಕುಟುಂಬದವರಿಗೆ ಸಾಂತ್ವಾನ ಹೇಳಿದ ಸಂದರ್ಭ.

ಶಿವಕೇರಿಯವರಾದ ದಿವಾಕರ್ ಗಾಂಧೀನಗರದಲ್ಲೇ ವಾಸವಾಗಿದ್ದರು. ಅವರ ಪತ್ನಿ ಶೋಭಾ ಅವರನ್ನು ಭೇಟಿಮಾಡಿ ನನ್ನ ಕೈಲಾದಷ್ಟು ಸಹಾಯ ಮಾಡಲಾಯಿತು.

ಇದೊಂದು ತಡೆಗಟ್ಟಬಹುದಾದ ದುರ್ಘಟನೆ. ವಿದ್ಯುತ್ ತಂತಿಗಳ ಸರಿಯಾದ ನಿರ್ವಹಣೆ ಇಲ್ಲದ ಕಾರಣ ಅಮಾಯಕರೊಬ್ಬರ ಸಾವಾಗಿದೆ. ಈ ರೀತಿಯ ಅವಘಡಗಳನ್ನು ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಪೊಲೀಸರಿಗೆ ಸೂಕ್ತ ಕ್ರಮ ಕೈಗೊಳ್ಳಲು ಕೋರಲಾಗಿದೆ.

#Kodagu #Coorg #Virajpet #Ponnampet #Kushalnagar #Madikeri

 
 

My humble tributes to Field Marshal Kodandera Madappa Cariappa, 15/05/2022

ಕೊಡಗಿನ ಹೆಮ್ಮೆಯ ವರಪುತ್ರ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರಿಯಪ್ಪ ಅವರ ಪುಣ್ಯಸ್ಮರಣೆಯಂದು ನನ್ನ ಗೌರವಪೂರ್ಣ ನಮನಗಳು. ನಿಮ್ಮ ನೆನಪು ನಮಗೆ ಚೇತನದಾಯಕ. My humble tributes to Field Marshal Kodandera Madappa Cariappa, the first Indian Commander-in-Chief of the Indian Army on his anniversary.
 
 
img
 

Meeting of the Virajpet town party members, 15/05/2022

ಪಕ್ಷದ ವಿರಾಜಪೇಟೆ ನಗರ ಸದಸ್ಯರ ಸಭೆಯಲ್ಲಿ ಪಾಲ್ಗೊಂಡು ಅನೇಕ ವಿಷಯಗಳ ಬಗ್ಗೆ ಸಮಾಲೋಚನೆ ನಡೆಸಲಾಯಿತು. ಪಕ್ಷದ ಬಲವರ್ಧನೆಗೆ ಮಾಡಬೇಕಾದ ಕಾರ್ಯಗಳು, ಸಂಘಟನೆಯನ್ನು ಬಲಪಡಿಸುವ ಮಾರ್ಗಗಳು ಹಾಗೂ ಸ್ಥಳೀಯ ಮಟ್ಟದಲ್ಲಿ ಪಕ್ಷದ ಮುಂದಿರುವ ಸವಾಲುಗಳ ಬಗ್ಗೆ ವಿಚಾರ ವಿನಿಮಯ ನಡೆಯಿತು. ಮುಂದಿನ ದಿನಗಳಲ್ಲಿ ಪಕ್ಷದ ಎಲ್ಲಾ ಬೆಂಬಲಿಗರ, ಸದಸ್ಯರ ಮತ್ತು ಮುಖಂಡರ ಸಭೆಗಳು ಎಲ್ಲಾ ಊರುಗಳಲ್ಲಿ, ಪಟ್ಟಣಗಳಲ್ಲಿ ಜರುಗಲಿದೆ. #Kodagu #Coorg #Virajpet #Madikeri #Kushalnagar #Ponnampet
 
 
img