Ganesha fest at Shivakeri. ಶಿವಕೇರಿಯಲ್ಲಿ ಗಣೇಶೋತ್ಸವ, 14/09/2022
ವಿರಾಜಪೇಟೆಯ ಶಿವಕೇರಿಯಲ್ಲಿ ಶ್ರೀ ವಿನಾಯಕ ಯುವ ಸಮಿತಿಯ ವತಿಯಿಂದ ಸುಂದರವಾದ ಗಣೇಶೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಲ್ಲಿಗೆ ಭೇಟಿಕೊಟ್ಟು ದೇವರಿಗೆ ಪ್ರಾರ್ಥನೆ ಸಲಿಸಿ ಆಯೋಜಕರಿಗೆ ಶುಭ ಕೋರಿದೆ.
ಸ್ಥಳೀಯರನ್ನು ಒಗ್ಗೂಡಿಸಿ ಗಣೇಶೋತ್ಸವ ಬಹಳ ಅಚ್ಚುಕಟ್ಟಾಗಿ ನಿರ್ವಹಿಸಲಾಗಿತ್ತು. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಪ್ರಾರಂಭವಾದ ಸಾರ್ವಜನಿಕ ಗಣೇಶೋತ್ಸವ ಈಗ ನಮ್ಮ ಸಂಸ್ಕೃತಿಯನ್ನು ಬೆಳೆಸಲು, ಯುವಕರನ್ನು ಪ್ರೇರೇಪಿಸಲು, ಸಮಾಜದಲ್ಲಿನ ಒಡಕುಗಳನ್ನು ಬೆಸೆಯಲು ಬಳಸಬೇಕಿದೆ.
ನನ್ನನ್ನು ಕಾರ್ಯಕ್ರಮಕ್ಕೆ ಬರಮಾಡಿಕೊಂಡು, ಸನ್ಮಾನ ಕೂಡ ಮಾಡಿದ ವಿನಾಯಕ ಯುವ ಸಮಿತಿಗೆ ಧನ್ಯವಾದಗಳು. ನಿಮ್ಮ ಸಾಮಾಜಿಕ ಕಳಕಳಿಯ ಕೆಲಸಗಳು ಮುಂದುವರೆಯಲಿ ಎಂದು ಆಶಿಸುತ್ತೇನೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Shivakeri

Involvement of BJP MLA in PSI scam, 13/09/2022
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಶಾಸಕ
ಪಿಎಸ್‌ಐ ನೇಮಕಾತಿ ಹಗರಣದಲ್ಲಿ ಕನಕಗಿರಿ ಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ ದಢೇಸೂಗೂರು ಲಂಚ ಪಡೆದಿರುವುದಾಗಿ ತಾವೇ ಒಪ್ಪಿಕೊಂಡರು ಅವರ ವಿರುದ್ಧ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿರುವುದರ ವಿರುದ್ಧ ಇಂದು ನಮ್ಮ ಪಕ್ಷದ ಪತ್ರಿಕಾ ಗೋಷ್ಠಿ ಏರ್ಪಡಿಸಲಾಗಿತ್ತು.
ಕೆ.ಪಿ.ಸಿ.ಸಿ ಸಂವಹನ ಮತ್ತು ಜಾಲತಾಣ ವಿಭಾಗದ ಅಧ್ಯಕ್ಷರಾದ ಪ್ರಿಯಾಂಕ್ ಖರ್ಗೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಅವರಿದ್ದ ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಘಟನೆಯ ಕಾನೂನು ಅಂಶಗಳನ್ನು ವಿವರಿಸಿದೆ.
ಭ್ರಷ್ಟಾಚಾರ ತಡೆ ಕಾಯ್ದೆ ಅಡಿಯಲ್ಲಿ ದಢೇಸೂಗೂರು ಮಾಡಿರುವ ಹೇಳಿಕೆ ಮೇಲೆ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಾಗಿದೆ. ಲೋಕಾಯುಕ್ತರು ಕೂಡ ಕಾನೂನು ಕ್ರಮ ಜರುಗಿಸಬಹುದು. ಲೋಕಪಾಲ್ ಮಸೂದೆಯಲ್ಲಿ ಲೋಕಪಾಲರು ಕೂಡ ಇವರನ್ನು ಶಾಸಕ ಸ್ಥಾನದಿಂದ ಅನರ್ಹ ಗೊಳಿಸಬಹುದಾಗಿದೆ.
ಭ್ರಷ್ಟಾಚಾರ ಕಣ್ಣಮುಂದೆ ಇದ್ದರು, ಸಾಕ್ಷಿ ಹೊರಬಂದು 10 ದಿನಗಳಾದರೂ ಯಾವುದೇ ಕ್ರಮ ಜರುಗಿಸದೆ ಇರುವುದು ಆಡಳಿತ ಇದರಲ್ಲಿ ಶಾಮೀಲಾಗಿರುವುದನ್ನು ಸೂಚಿಸುತ್ತದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #PSIScam #Corruption #40%
Onam celebrations. ಓಣಂ ಆಚರಣೆ , 12/09/2022
ಚನ್ನಯ್ಯನ ಕೋಟೆಯಲ್ಲಿ ಹಿಂದೂ ಮಲಯಾಳಿ ಸಮಿತಿಯ ವತಿಯಿಂದ ಓಣಂ ಹಬ್ಬದ ಆಚರಣೆಯಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭ ಕೋರಿದೆ.
ಕೇರಳ ರಾಜ್ಯದ ನಾಡ ಹಬ್ಬವಾದ ಓಣಂ ಜಾತಿ ಧರ್ಮವನ್ನು ಮೀರಿ ಎಲ್ಲರೂ ಆಚರಿಸುವ ಹಬ್ಬ. ಈಗ ದಕ್ಷಿಣ ಭಾರತದ ಇತರ ಕಡೆಗಳಲ್ಲೂ ಜನ ಇಷ್ಟಪಟ್ಟು ಮಾಡುವ ಒಂದು ಹಬ್ಬವಾಗಿ ಬೆಳೆದು ಬಂದಿದೆ.
ಬಹಳ ವಿಜೃಂಭಣೆಯಿಂದ ಹಬ್ಬವನ್ನು ಆಯೋಜನೆ ಮಾಡಿದ್ದ ಸಮಿತಿಯ ಪದಾಧಿಕಾರಿಗಳಿಗೆ ಅಭಿನಂದನೆಗಳು. ನಮ್ಮ ಸಾಂಸ್ಕೃತಿಕ ಪರಂಪರೆಗಳನ್ನು ಮುನ್ನಡೆಸಿಕೊಂಡು ಹೋಗುವ ಅವರ ಪ್ರಜ್ಞೆ ಶ್ಲಾಘನೀಯ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #GowriGanesha #GaneshaChaturti #Onam

168th Anniversary Celebrations of Sri Narayana Guru , 11/09/2022
168ನೇ ಶ್ರೀ ನಾರಾಯಣ ಗುರು ಜಯಂತಿ ಆಚರಣೆ
ಕೊಡಗಿನ ಸಿದ್ದಾಪುರದಲ್ಲಿ, ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಶ್ರೀ ನಾರಾಯಣ ಗುರುಗಳು ತೋರಿದ ಮಾರ್ಗದ ಬಗ್ಗೆ ಕೆಲವು ಮಾತನಾಡಿದೆ.
ಪ್ರಪಂಚದ ಎಲ್ಲಾ ಮನುಷ್ಯರಿಗೂ ಒಂದೇ ಜಾತಿ, ಒಂದೇ ಧರ್ಮ, ಒಂದೇ ದೇವರು ಎಂದು ಪ್ರತಿಪಾದನೆ ಮಾಡಿ ಸಾಮಾಜಿಕ ಕ್ರಾಂತಿಗೆ ಕಾರಣರಾದ ಶ್ರೀ ನಾರಾಯಣ ಗುರುಗಳ ಸಂದೇಶ ಹಿಂದೆಂದಿಗಿಂತಲೂ ಈಗ ಪ್ರಸ್ತುತ.
ಕುವೆಂಪು ಅವರ ವಿಶ್ವ ಮಾನವ ಸಂದೇಶಕ್ಕೆ ಶ್ರೀ ನಾರಾಯಣ ಗುರುಗಳ ಬದುಕು, ಆದರ್ಶಗಳು ಸ್ಪೂರ್ತಿಯಾಗಿದ್ದವು. ನಾರಾಯಣ ಗುರುಗಳ ಸಮಾನತೆಯ ಸಮಾಜ ಮತ್ತು ಜಾತ್ಯಾತೀತತೆಯ ಸಂದೇಶವೇ ನಮ್ಮ ಭಾರತದ ಸಂವಿಧಾನದ ಮೂಲ ಬುನಾದಿಯಾಗಿದೆ.
ಎಲ್ಲಾ ಜನರನ್ನು, ಎಲ್ಲಾ ಜಾತಿಗಳನ್ನು, ಎಲ್ಲಾ ಧರ್ಮಗಳನ್ನು, ಎಲ್ಲಾ ದಾರ್ಶನಿಕಗಳನ್ನು ಸಮನಾಗಿ ಕಾಣುವ ಅವರ ವಚನವನ್ನು ನಾವೆಲ್ಲರೂ ಮೈಗೂಡಿಸಿಕೊಳ್ಳಬೇಕು ಎನ್ನುವ ಮಾತನ್ನು ಹೇಳಿದೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #GowriGanesha #GaneshaChaturti #NarayanaGuru #SriNarayanaGuru

Ganesha festival at Gandhinagar, Virajpet, 10/09/2022
ವಿರಾಜಪೇಟೆಯ ಗಾಂಧಿನಗರದಲ್ಲಿ, ಶ್ರೀ ಗಣಪತಿ ಸೇವಾ ಸಮಿತಿ ಆಶ್ರಯದಲ್ಲಿ ನಡೆದ ಗೌರಿ-ಗಣೇಶ ಉತ್ಸವದಲ್ಲಿ ಪಾಲ್ಗೊಂಡ ಸಂಧರ್ಭ.
ಬ್ರಿಟಿಷರ ವಿರುದ್ಧ ಜನರನ್ನು ಸಂಘಟಿಸಲು ಸಾರ್ವಜನಿಕ ಗಣೇಶೋತ್ಸವ ಪ್ರಾರಂಭವಾಗಿ ನೂರು ವರ್ಷ ತುಂಬಿದೆ. ಈಗ ಅದು ನಮ್ಮನ್ನು ಸಾಮಾಜಿಕವಾಗಿ ಒಗ್ಗೂಡಿಸುವ ಒಂದು ಪರಂಪರೆಯಾಗಿ ಬೆಳೆದು ಬಂದಿದೆ. ಜನರ ಮನಸ್ಸುಗಳನ್ನು ಬೆಸೆಯುವ ಒಂದು ಸಾಧನವಾಗಿದೆ.
ಬಹಳ ಅಚ್ಚುಕಟ್ಟಾಗಿ ಗಣೇಶೋತ್ಸವವನ್ನು ಆಯೋಜನೆ ಮಾಡಿದ ಸಮಿತಿಯವರಿಗೆ ಅಭಿನಂದನೆ ಸಲ್ಲಿಸಿದೆ. ಉತ್ಸವದಲ್ಲಿ ಸಾಧನೆ ಮಾಡಿದ ಮಕ್ಕಳಿಗೆ ಸನ್ಮಾನ ಮಾಡಿದ್ದು ಶ್ಲಾಘನೀಯ.
ನಾಡಿನ ಹಲವು ಕಡೆ ನೈಸರ್ಗಿಕ ವಿಕೋಪದಿಂದ ಬಳಲುತ್ತಿರುವ ಜನರಿಗೆ ದೇವರ ಕೃಪೆಯಿಂದ ಒಳಿತಾಗಲಿ ಎಂದು ಬೇಡಿಕೊಂಡೆ.
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal #Gandhinagar #GowriGanesha #GaneshaChaturti
