Inauguration of Inchara News Kodagu at Gonikoppal , 09/09/2022

ಗೋಣಿಕೊಪ್ಪದಲ್ಲಿ ನಡೆದ, ಇಂಚರ ಕೊಡಗು ಚಾನೆಲ್ ಉದ್ಘಾಟನೆ ಸಮಾರಂಭದಲ್ಲಿ ಪಾಲ್ಗೊಂಡು ಎಲ್ಲರಿಗೂ ಶುಭ ಕೋರಿದೆ.
 
ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಮಾಧ್ಯಮ ಸ್ವತಂತ್ರವಾಗಿ ಕಾರ್ಯನಿರ್ವಹಿಸಬೇಕಾದ ಅಗತ್ಯದ ಬಗ್ಗೆ ಮಾತನಾಡಿದೆ. ನಿರ್ಭೀತವಾಗಿ ಸತ್ಯಶೋಧನೆಯ ಕೆಲಸ ಮಾಡುವುದೇ ಮಾಧ್ಯಮಗಳ ಮುಖ್ಯ ಕರ್ತವ್ಯವಾಗಿದೆ.
 
ಅರಮೇರಿ ಕಳಂಚೇರಿ ಮಠದ ಶ್ರೀ ಶ್ರೀ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸೆಂಟ್ ಥಾಮಸ್ ಶಾಲೆಯ ಆಡಳಿತಾಧಿಕಾರಿ ಶ್ರೀ ಫ್ರಾನ್ಸಿಸ್ ಚಿರಕಲ್, ನಟರಾದ ಭುವನ್ ಪೊನ್ನಣ್ಣ, ಹರ್ಷಿಕಾ ಪೂಣಚ್ಚ ಸೇರಿದಂತೆ ಇತರ ಗಣ್ಯರ ಇದ್ದ ವೇದಿಕೆಯಲ್ಲಿ ಮಾತನಾಡಿ ಹೊಸ ವಾಹಿನಿಗೆ ಶುಭ ಹಾರೈಸಿದೆ.
 
ಚಾನೆಲ್'ನ ವ್ಯವಸ್ಥಾಪಕ ನಿರ್ದೇಶಕರಾದ ಡಿ. ನಾಗೇಶ್, ಚಾನೆಲ್'ನ ಸಂಸ್ಥಾಪಕರಾದ ನರಸಿಂಹಮೂರ್ತಿ, ಚಾನೆಲ್'ನ ಪತ್ರಕರ್ತರು, ಸಿಬ್ಬಂದಿ ವರ್ಗಕ್ಕು ಅಭಿನಂದನೆಗಳು.
 
#Kodagu #Madikeri #Virajpet #Ponnampet #Coorg #Thithimathi #Somwarpet #Kaveri #Talacauvery #Hudikeri #Mayamudi #Gonikoppal
 
 
img
 

Addressing Kodagu District Lorry Drivers and Owners Association, 08/09/2022

ಕೊಡಗು ಜಿಲ್ಲಾ ಲಾರಿ ಚಾಲಕ ಹಾಗೂ ಮಾಲೀಕರ ಸಂಘದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದಸ್ಯರನ್ನು ಉದ್ದೇಶಿಸಿ ಮಾತನಾಡಿದೆ.
 
ಯಾವುದೇ ವೃತ್ತಿಯಲ್ಲಿ ಇರುವವರು ಸಂಘಟಿತರಾಗುವುದು ಕಾನೂನಿನ ಪ್ರಕಾರ ನಮಗೆ ಸಂವಿಧಾನ ನೀಡಿರುವ ಹಕ್ಕು. ಸಂಘಟಿತರಾಗಿ ನಮ್ಮ ಬೇಡಿಕೆಗಳನ್ನು ಈಡೇರಿಸುವುದು, ಹಕ್ಕುಗಳನ್ನು ಪ್ರತಿಪಾದಿಸುವುದು ಸುಲಭ, ಎಂಬ ಮಾತನ್ನು ಈ ಸಂದರ್ಭದಲ್ಲಿ ತಿಳಿಸಿದೆ.
 
ವ್ಯಾಪಾರಸ್ಥರು, ಸ್ವಯಂ ಉದ್ಯೋಗದಲ್ಲಿ ತೊಡಗಿರುವವರಿಗೆ ಸಾಕಷ್ಟು ಸವಾಲಿನ ದಿನಗಳು ಎದುರಾಗಿವೆ. ಆಡಳಿತ ಮತ್ತು ಸರ್ಕಾರಿ ಮಟ್ಟದಲ್ಲಿ ಇವುಗಳಿಗೆ ಪರಿಹಾರ ಪಡೆಯಲು ಸಂಘಟನೆಯ ಅವಶ್ಯಕತೆ ಬಗ್ಗೆ ವಿವರಿಸಿದೆ.
 
ಕಾರ್ಯಕ್ರಮಕ್ಕೆ ನನ್ನನು ಆಹ್ವಾನಿಸಿದ ಸಂಘದ ಪದಾಧಿಕಾರಿಗಳಿಗೂ, ಪ್ರೀತಿಯಿಂದ ಬರಮಾಡಿಕೊಂಡ ಎಲ್ಲಾ ಸದಸ್ಯರಿಗೂ, ಮತ್ತು ಸಂಘಟನೆಗೂ ಶುಭವಾಗಲಿ.
 
#Kailpodh #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Hudikeri #Sports #Mayamudi #GunFestival
 
 
img
 

Clearing doubts about the Gun license exemption case, 07/09/2022

Img

 

ಕಳೆದ ಭಾನುವಾರ ಮಾಯಮುಡಿಯಲ್ಲಿ ತೋಕ್ ನಮ್ಮೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಬಂದೂಕು ಪರವಾನಿಗೆ ಕಾನೂನು ಹೋರಾಟದ ಬಗ್ಗೆ ಇರುವ ಕೆಲವು ಅನುಮಾನಗಳಿಗೆ ವಿವರಣೆ ನೀಡಿದೆ.

ಕೊಡವರು ಮತ್ತು ಜಮ್ಮಾ ಹಿಡುವಳಿದಾರರಿಗೆ ಇರುವ ಬಂದೂಕು ಪರವಾನಗಿ ವಿನಾಯತಿಯ ಇತಿಹಾಸ ವಿವರಿಸಿ, ಈಗ ನಡೆಯುತ್ತಿರುವ ಕಾನೂನು ಹೋರಾಟ ಹೇಗೆ ನಮ್ಮ ಸಂಸೃತಿಯನ್ನು ಕಾಪಾಡಲು ಅವಶ್ಯಕ ಎಂದು ವಿವರಿಸಿದೆ.

ಯಾರ ವಿರುದ್ದವೂ ಈ ಕಾನೂನು ಹೋರಾಟ ನಡೆಯುತ್ತಿಲ್ಲ. ಬದಲಿಗೆ ನಮ್ಮ ವಿರುದ್ಧ ಬಂದಿರುವ ತೊಡಕಿಗೆ ನಾವು ನ್ಯಾಯಾಲಯದಲ್ಲಿ ಉತ್ತರಿಸಬೇಕಿದೆ. ನಮ್ಮ ಮುಂದಿನ ಪೀಳಿಗೆಗಳಿಗೆ ನಮ್ಮ ಸಂಪ್ರದಾಯಗಳನ್ನು ಉಳಿಸುವ ಕರ್ತವ್ಯ ನಮ್ಮೆಲ್ಲರ ಮೇಲಿದೆ.

#Kailpodh #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Hudikeri #Sports #Mayamudi #GunFestival


Ganesha pooja and Muthamma temple visit at Urs Nagar, Virajpet, 06/09/2022

ವಿರಾಜಪೇಟೆಯ ಅರಸು ನಗರದಲ್ಲಿ ಗಣೇಶ ಉತ್ಸವದ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುತ್ತಮ್ಮ ದೇವಸ್ಥಾನಕ್ಕೆ ಭೇಟಿ ಕೊಟ್ಟು ದೇವರ ಆಶೀರ್ವಾದ ಪಡೆದೆ. ದೇವರ ಕೃಪೆ ಎಲ್ಲ ಜನರ ಮೇಲು ಇರಲಿ ಎಂದು ಪ್ರಾರ್ಥಿಸಿದೆ.
 
ಇದೇ ವೇಳೆ ಸ್ಥಳೀಯ ಜನರ ಜೊತೆ ವಿಚಾರ ವಿನಿಮಯ ಮಾಡುವ ಅವಕಾಶವೂ ಒದಗಿ ಬಂತು. ಭೇಟಿಯ ಸಂದರ್ಭದಲ್ಲಿ ನನ್ನನು ಆತ್ಮೀಯವಾಗಿ ಬರಮಾಡಿಕೊಂಡ ಎಲ್ಲಾ ಸ್ಥಳೀಯರಿಗೂ, ಹಿರಿಯರಿಗೂ, ಸ್ನೇಹಿತರಿಗೂ ಧನ್ಯವಾದಗಳು.
 
#Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Hudikeri #Sports #Mayamudi #Kailpodh #GaneshaChaturti
 
 
img
 

Gun festival and shooting competition at Mayamudi, 05/09/2022

ಮಾಯಮುಡಿಯಲ್ಲಿ ಸೆಪ್ಟೆಂಬರ್ ನಾಲ್ಕರಂದು ತೋಕ್ ನಮ್ಮೆ ಪ್ರಯುಕ್ತ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆಯನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದೆ.
 
ಮಾಯಮುಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಸ್ಪರ್ಧೆಯಲ್ಲಿ ಪಾಲ್ಗೊಂಡ ಸ್ಪರ್ದಿಗಳಿಗೆ ಶುಭ ಕೋರಿ, ಆಯೋಜಕರಿಗೆ ಅಭಿನಂದಿಸಿದೆ. ಇಂತಹ ಸ್ಪರ್ಧೆಗಳಿಂದ ಕೊಡಗಿನ ಸಾಂಸ್ಕೃತಿಕ ಕಲೆ ಜೀವಂತವಾಗಿರಿಸಲು ಸಹಕಾರಿಯಾಗಿದೆ. ಮುಂದಿನ ಪೀಳಿಗೆಗೆ ಕೊಡಗಿನ ಸಂಸ್ಕೃತಿಯ ಅರಿವನ್ನು ಮೂಡಿಸುವಲ್ಲಿ ಆಯೋಜಕರ ಪ್ರಯತ್ನವನ್ನು ಶ್ಲಾಘಿಸಿದೆ.
 
ಕಾರ್ಯಕ್ರಮದಲ್ಲಿ ಪಕ್ಷದ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಶ್ರೀ ಮೀದೇರಿರ ನವೀನ್, ಟಾಟು ಮೊಣ್ಣಪ್ಪ, ಬಾನಂಡ ಪೃತ್ಯು ಮತ್ತಿತರರು ಹಾಜರಿದ್ದರು.
 
#Kailpodh #Kodagu #Madikeri #Virajpet #Ponnampet #Coorg #Kodagu #Virajpet #Madikeri #Ponnampet #Thithimathi #Somwarpet #Kaveri #Talacauvery #Hudikeri #Sports #Mayamudi
 
 
img
img
img
img
img
img
img
img
img
img
img
img
img
img
img