Information report of MCPCS administrative board in Mysore was submitted by officials and members of the association at Bangalore Vidhana Soudha office., 27/12/2025
ಮೈಸೂರಿನಲ್ಲಿರುವ ಎಂ.ಸಿ.ಪಿ.ಸಿ.ಎಸ್ ಸಂಘದ ಆಡಳಿತ ಮಂಡಳಿಯ ಮಾಹಿತಿ ಇರುವ ವರದಿಯನ್ನು ಬೆಂಗಳೂರಿನ ವಿಧಾನಸೌಧದ ಕಚೇರಿಯಲ್ಲಿ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು ಸಲ್ಲಿಸಿದರು.

Many many thanks for this honourable honour given by the Laguide group of Kannada Law Monthly Paper in Mysore., 27/12/2025
ಮೈಸೂರಿನಲ್ಲಿ ಕನ್ನಡ ಕಾನೂನು ಮಾಸಪತ್ರಿಕೆ ಲಾಗೈಡ್ ಬಳಗದ ವತಿಯಿಂದ ಆತ್ಮೀಯವಾಗಿ ನೀಡಿದ ಈ ಗೌರವ ಸನ್ಮಾನಕ್ಕೆ ಅನಂತ ಧನ್ಯವಾದಗಳು.

Siddapur's disabled young man Pawan visited the home office and assured that he will listen to his report and take appropriate measures for necessary assistance and livelihood., 26/12/2025
ಸಿದ್ದಾಪುರದ ದಿವ್ಯಾಂಗ ಯುವಕ ಪವನ್ ಅವರು ಗೃಹ ಕಚೇರಿಗೆ ಭೇಟಿ ನೀಡಿದ್ದು ಅವರ ಅಹವಾಲನ್ನು ಆಲಿಸಿ ಅಗತ್ಯ ಸಹಾಯ ಹಾಗೂ ಜೀವನೋಪಾಯಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಲಾಯಿತು.

Visited St. Annamma Church, Virajpete, party leader Joakim, and other committee members were greeted for Christmas festival., 26/12/2025
ವಿರಾಜಪೇಟೆಯ ಸಂತ ಅನ್ನಮ್ಮ ಚರ್ಚ್ ವತಿಯಿಂದ ಭೇಟಿ ನೀಡಿದ ಚರ್ಚಿನ ಧರ್ಮ ಗುರುಗಳು, ಪಕ್ಷದ ಮುಖಂಡರಾದ ಜೋಕಿಮ್ ರವರು, ಹಾಗೂ ಇತರ ಸಮಿತಿಯ ಸದಸ್ಯರಿಗೆ ಕ್ರಿಸ್ಮಸ್ ಹಬ್ಬದ ಶುಭ ಹಾರೈಸಲಾಯಿತು.

Many thanks to the honour given by the leaders of the District Minority Community for the government for providing grant for the development of the minority community in Kodagu district., 26/12/2025
ಕೊಡಗು ಜಿಲ್ಲೆಯ ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೆ ಅನುದಾನವನ್ನು ಸರ್ಕಾರದಿಂದ ಒದಗಿಸಿ ಕೊಟ್ಟಿದ್ದಕ್ಕೆ ಜಿಲ್ಲಾ ಅಲ್ಪಸಂಖ್ಯಾತರ ಸಮುದಾಯದ ಪ್ರಮುಖರು ನೀಡಿದ ಈ ಸನ್ಮಾನಕ್ಕೆ ಅನಂತ ಧನ್ಯವಾದಗಳು.
