Concrete road constructed in Mogaragalli ward area of Virajpet Municipality is ready for public use., 02/06/2026
ವಿರಾಜಪೇಟೆ ಪುರಸಭಾ ವ್ಯಾಪ್ತಿಯ ಮೊಗರಗಲ್ಲಿ ವಾರ್ಡ್ ವ್ಯಾಪ್ತಿಯಲ್ಲಿ ನಿರ್ಮಾಣವಾದ ಕಾಂಕ್ರೀಟ್ ರಸ್ತೆ ಸಾರ್ವಜನಿಕರ ಬಳಕೆಗೆ ಸಿದ್ಧಗೊಂಡಿದೆ.

Additional room work of Nagarahole Valmiki Ashram School hostel which is under the scheduled welfare department of Nalkeri Panchayat, Ponnampet taluk, Virajpet assembly constituency., 02/06/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕು ನಾಲ್ಕೇರಿ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗೆ ಒಳಪಡುವ ನಾಗರಹೊಳೆ ವಾಲ್ಮೀಕಿ ಆಶ್ರಮ ಶಾಲೆಯ ವಸತಿ ನಿಲಯದ ಹೆಚ್ಚುವರಿ ಕೊಠಡಿ ಕಾಮಗಾರಿ ಪ್ರಗತಿಯಲ್ಲಿದೆ.

Development work on the main road (near Sunkadakatte) connecting Virajpet-Ammati in Virajpet assembly constituency is in the closing phase., 02/06/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ವಿರಾಜಪೇಟೆ-ಅಮ್ಮತಿ ಸಂಪರ್ಕಿಸುವ ಮುಖ್ಯ ರಸ್ತೆ (ಸುಂಕದಕಟ್ಟೆ ಬಳಿ) ಅಭಿವೃದ್ಧಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ.

Happy new academic year to all the students stepping into the school yard with new academic year, new classes, new books, new enthusiasm and new desires, loving parents who always stand by their children and respected teachers who give light of knowledge., 01/06/2026
ಹೊಸ ಶೈಕ್ಷಣಿಕ ವರ್ಷ, ಹೊಸ ತರಗತಿಗಳು, ಹೊಸ ಪುಸ್ತಕಗಳು, ಹೊಸ ಹುರುಪು ಮತ್ತು ಹೊಸ ಆಸೆಗಳೊಂದಿಗೆ ಶಾಲೆಯ ಅಂಗಳಕ್ಕೆ ಹೆಜ್ಜೆ ಇಡುತ್ತಿರುವ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಸದಾ ಮಕ್ಕಳ ಬೆಂಬಲವಾಗಿ ನಿಲ್ಲುವ ಪ್ರೀತಿಯ ಪೋಷಕರಿಗೂ ಮತ್ತು ಜ್ಞಾನದ ಬೆಳಕನ್ನು ನೀಡುವ ಪೂಜ್ಯ ಶಿಕ್ಷಕ ವೃಂದದವರಿಗೆ ಹೊಸ ಶೈಕ್ಷಣಿಕ ವರ್ಷದ ಹಾರ್ದಿಕ ಶುಭಾಶಯಗಳು.

Congratulations to the Royal Challengers Bangalore team who beat Gujarat Titans team and won the trophy for the second time with a tremendous achievement in the final of the IPL T-20 2026 edition., 01/06/2026
ಐಪಿಎಲ್ T-20 2026 ಆವೃತ್ತಿಯ ಫೈನಲ್ ಪಂದ್ಯಾಟದಲ್ಲಿ, ಗುಜರಾತ್ ಟೈಟನ್ಸ್ ತಂಡವನ್ನು ಮಣಿಸಿ ಅಮೋಘ ಸಾಧನೆಯೊಂದಿಗೆ ಎರಡನೇ ಬಾರಿಗೆ ಟ್ರೋಫಿಯನ್ನು ಮುಡಿಗೇರಿಸಿಕೊಂಡ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅಭಿನಂದನೆಗಳು.
