Over 15 BJP Leaders and Activists Join Congress in Karagunda, 03/10/2026
ಮಡಿಕೇರಿ ತಾಲೂಕಿನ ಬೆಟ್ಟಗೇರಿಯ ಕಾರಗುಂದ ಭಾಗದ 15ಕ್ಕೂ ಹೆಚ್ಚು ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ನನ್ನ ಸಮ್ಮುಖದಲ್ಲಿ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡರು.
ಎಲ್ಲರಿಗೂ ಪಕ್ಷದ ಬಾವುಟವನ್ನು ನೀಡಿ ಶಲ್ಯ ಹೊದಿಸುವ ಮೂಲಕ ಜಿಲ್ಲಾ ಅಧ್ಯಕ್ಷರಾದ ತಿತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸೌಕತ್ ಆಲೀ, ವಲಯ ಅಧ್ಯಕ್ಷರಾದ ಕೊಡಗನ ತೀರ್ಥ ಕುಮಾರ್ ರವರ ಜೊತೆಗೂಡಿ ಪಕ್ಷಕ್ಕೆ ಬರಮಾಡಿಕೊಳ್ಳಲಾಯಿತು.

Participated in Ganeshotsava Celebrations in Virajpet, 03/10/2026
ವಿರಾಜಪೇಟೆ ತಾಲೂಕು ಅಮ್ಮತಿ ಭಾಗದ ಶ್ರೀ ಗಜಾನನ ಗೆಳೆಯರ ಬಳಗ, ಶ್ರೀ ಚೌಡೇಶ್ವರಿ ರಾಮ ಮಂದಿರ ಸಮಿತಿ ಹಾಗೂ ಬಸವೇಶ್ವರ ದೇವಸ್ಥಾನದಲ್ಲಿ ಆಯೋಜಿಸಿದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

Bike Ride Promotes Road Safety Awareness After Gonikoppalu Bypass Inauguration, 02/10/2026
ಗೋಣಿಕೊಪ್ಪಲುವಿನ ನೂತನ ಬೈಪಾಸ್ ರಸ್ತೆ ಉದ್ಘಾಟಿಸಿದ ಬಳಿಕ ಸ್ಥಳೀಯರ ಕೋರಿಕೆ ಮೇರೆಗೆ, ಸದ್ರಿ ರಸ್ತೆಯಲ್ಲಿ ಬೈಕ್ ಚಲಾಯಿಸುವ ಮೂಲಕ ಸುರಕ್ಷತೆಯ ಬಗ್ಗೆ ಜಾಗೃತಿ ಮೂಡಿಸುವ ಪ್ರಯತ್ನ ಮಾಡಿದೆ.

Machettira Poovamma Wins Gold and Silver at Asian Games, 02/10/2026
ಏಷ್ಯಾನ್ ಗೇಮ್ಸ್ ಅಥ್ಲೆಟಿಕ್ಸ್ ವಿಭಾಗದಲ್ಲಿ, ಕೊಡಗಿನ ಕುವರಿ ಮಾಚೇಟ್ಟಿರ ಪೂವಮ್ಮ ರವರು ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗೆದ್ದು ದೇಶಕ್ಕೆ ಹಾಗೂ ನಾಡಿಗೆ ಹೆಮ್ಮೆಯನ್ನು ತಂದಿರುತ್ತಾರೆ.
ಅವರೊಂದಿಗೆ ವಿಡಿಯೋ ಕಾಲ್ ಮುಖಾಂತರ ಮಾತನಾಡಿ, ಅವರ ಸಾಧನೆಯ ಬಗ್ಗೆ ಅಭಿನಂದಿಸಿ ಅವರ ಮುಂದಿನ ಕ್ರೀಡಾ ಭವಿಷ್ಯ ಉಜ್ವಲವಾಗಿರಲಿ ಎಂದು ಹಾರೈಸಿದೆ

**Tributes to Former Prime Minister Bharat Ratna Lal Bahadur Shastri on His Birth Anniversary**, 02/10/2026
ಸಜ್ಜನ ರಾಜಕಾರಣಿ
ಮಾಜಿ ಪ್ರಧಾನಿ ಭಾರತರತ್ನ
ಶ್ರೀ ಲಾಲ್ ಬಹದ್ದೂರ್ ಶಾಸ್ತ್ರಿ
ಅವರ ಜನ್ಮದಿನದಂದು ಶತ ಶತ ನಮನಗಳು
