Permanent creative projects required to solve the problem of increased incidents of loss due to wild elephants in Kodagu, 30/08/2021

ಮನುಷ್ಯರು ಮತ್ತು ಕಾಡುಪ್ರಾಣಿಗಳ ನಡುವೆ ಸಂಘರ್ಷಕ್ಕೆ ಯಾವುದೇ ತಾತ್ಕಾಲಿಕ ಕ್ರಮಗಳಿಂದ ಪ್ರಯೋಜನವಿಲ್ಲ. ಅದಕ್ಕೆ ಶಾಶ್ವತ ಯೋಜನೆ ರೂಪಿಸಿ ಅನುಷ್ಠಾನ ಮಾಡಬೇಕು. ಕೊಡಗಿನಲ್ಲಿ ಕಾಡಾನೆಗಳಿಂದ ಆಗುತ್ತಿರುವ ನಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಶಾಶ್ವತ ಕ್ರಿಯಾಶೀಲ ಯೋಜನೆಗಳಿಂದ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ರೈತರಿಗೆ ಪರಿಹಾರ ಕೊಡಲು ಕೂಡ ಸತಾಯಿಸುತ್ತಿರುವ ಸರ್ಕಾರ ಸಮಸ್ಯೆ ವಿಕೋಪಕ್ಕೆ ಹೋಗುತ್ತಿದ್ದರು ಕಣ್ಣು ಮುಚ್ಚಿ ಕೂತಿದೆ.
 
 
img
img
img
 

My heartfelt thanks to the media friends for encouraging the scholarship program by publishing in channels and newspapers, 29/08/2021

 

A student scholarship program, 29/08/2021

ಆಗಸ್ಟ್ 27, ಶುಕ್ರವಾರದಂದು ಎ.ಕೆ.ಸುಬ್ಬಯ್ಯ-ಪೊನ್ನಮ್ಮ ಶೈಕ್ಷಣಿಕ ಹಾಗೂ ದತ್ತಿ ಟ್ರಸ್ಟ್'ನ ವತಿಯಿಂದ, ವಿದ್ಯಾರ್ಥಿಯನಿಯರಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮವನ್ನು "ಶಕ್ತಿ" ದಿನಪತ್ರಿಕೆಯ ಸಹಯೋಗದೊಂದಿಗೆ ಆಯೋಜಿಸಲಾಗಿತ್ತು. ವಿದ್ಯಾರ್ಥಿ ವೇತನಕ್ಕೆ ಒಟ್ಟು 100 ಅರ್ಜಿಗಳನ್ನು ಸ್ವೀಕರಿಸಲಾಗಿತ್ತು. ಅವುಗಳಲ್ಲಿ 45 ಅರ್ಹ ಫಲಾನುಭವಿ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಲ್ಲಿ ಪ್ರತಿಯೊಬ್ಬರಿಗೂ ವರ್ಷಕ್ಕೆ ರೂ.10,000 ನಂತೆ ವಿದ್ಯಾರ್ಥಿ ವೇತನ ನೀಡಲಾಯಿತು. ಪಿ.ಯು.ಸಿ ಮುಗಿಸಿ ಡಿಗ್ರಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಸ್ಕಾಲರ್'ಶಿಪ್ ನೀಡಲಾಗುತ್ತಿದೆ. ಮುಂದಿನ ಎರಡು ವರ್ಷಗಳು ಕೂಡ ಈ ವಿದ್ಯಾರ್ಥಿಗಳಿಗೆ ವರ್ಷಕ್ಕೆ ತಲಾ ರೂ.10,000 ವಿದ್ಯಾರ್ಥಿ ವೇತನ ನೀಡಲಾಗುವುದು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಮುಖ್ಯ ಅತಿಥಿಗಳಿಗೆ, ಹಿರಿಯರಿಗೆ, ಕುಟುಂಬದವರಿಗೆ, ಸ್ನೇಹಿತರಿಗೆ, ನಮ್ಮ ಮೇಲೆ ಅಪಾರ ಪ್ರೀತಿ ವಿಶ್ವಾಸ ತೋರಿಸಿದ ಎಲ್ಲರಿಗೂ ನನ್ನ ವಂದನೆಗಳು ಮತ್ತು ಧನ್ಯವಾದಗಳು. ನಿಮ್ಮೆಲ್ಲರ ಆಶೀರ್ವಾದ, ಪ್ರೀತಿ-ವಿಶ್ವಾಸ ನಮ್ಮ ಮೇಲಿರಲಿ ಎಂದು ಆಶಿಸುತ್ತೇನೆ. ಈ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಆಯೋಜಿಸಲು ನೆರವಾದ ಎಲ್ಲ ಸ್ನೇಹಿತರಿಗೂ ನಾನು ಆಭಾರಿಯಾಗಿದ್ದೇನೆ. ಎಲ್ಲ ಮಾಧ್ಯಮ ಮಿತ್ರರಿಗೂ ನನ್ನ ಧನ್ಯವಾದಗಳು.
 
 
img
img
img
img
img
img
img
img
img
img
img
img
 

Scholarship for girl students of Kodagu, 01/08/2021

 
img
 

Appointment letter was distributed to the newly elected Kodagu District Level Law, Human Rights and Information Unit officials, 17/07/2021

ಶುಕ್ರವಾರ ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನೂತನವಾಗಿ ಆಯ್ಕೆಗೊಂಡ ಕೊಡಗಿನ ಜಿಲ್ಲಾಮಟ್ಟದ ಕಾನೂನು, ಮಾನವ ಹಕ್ಕು ಹಾಗೂ ಮಾಹಿತಿ ಘಟಕದ ಪದಾಧಿಕಾರಿಗಳಿಗೆ ನೇಮಕ ಪತ್ರವನ್ನು ವಿತರಿಸಲಾಯಿತು. ಮುಂದಿನ ದಿನಗಳಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲೂ ಇದೇ ಮಾದರಿ ಜಿಲ್ಲಾಮಟ್ಟದ ಕಾನೂನು ಘಟಕಗಳನ್ನು, ಮಾನವ ಹಕ್ಕುಗಳ ಘಟಕಗಳನ್ನು ಸದೃಢಗೊಳಿಸಲು ಕಾರ್ಯತಂತ್ರ ರೂಪಿಸಲಾಗುವುದು.
 
 
img